ಐಪಿಎಲ್ ಹೈ ಪ್ರೊಫೈಲ್ ಪಂದ್ಯದ ಮೇಲೆ ಕಾಳಬಜಾರ್ ಕರಿಛಾಯೆ, ತನಿಖೆಗೆ ಇಳಿದ ಖಾಕಿ ಪಡೆ

ಬೆಂಗಳೂರು : ಐಪಿಎಲ್ ಅಂಗವಾಗಿ ನಡೆದ ಆರ್ ಸಿ ಬಿ ಮತ್ತು ಸಿ ಕೆ ಎಸ್ ನಡುವಿನ ಹೈ-ಪ್ರೊಫೈಲ್ ಪಂದ್ಯಕ್ಕೆ ಸಂಬಂಧಿಸಿದ ಟಿಕೆಟ್‌ಗಳನ್ನು ಕಾಳಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ  ಕ್ರಮ ಕೈಗೊಳ್ಳಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಆನ್‌ಲೈನ್‌ನಲ್ಲಿ ವಿವಿಧ ಲಿಂಕ್‌ಗಳ ಮೂಲಕ ಟಿಕೆಟ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿ, ಬಳಿಕ ಅವುಗಳನ್ನು ಹೆಚ್ಚು ದರಕ್ಕೆ ಮರುಮಾರಾಟ ಮಾಡುತ್ತಿದ್ದರು. ₹5,000 ಮುಖಬೆಲೆಯ ಟಿಕೆಟ್‌ಗಳನ್ನು ₹20,000 ರಿಂದ ₹50,000 ವರೆಗೆ ಮಾರಾಟ ಮಾಡಲಾಗುತ್ತಿತ್ತು.

ಇದನ್ನೂ ಓದಿ ಬಾಂಬ್ ಸ್ಫೋಟದ ಆಕ್ರೋಶ: ಗುಂಪು ದಾಳಿ ಫೈರಿಂಗ್‌ನಲ್ಲಿ ಇಬ್ಬರು ಬಲಿ

ಈ ಪ್ರಕರಣದಲ್ಲಿ ಒಟ್ಟು 28 ಟಿಕೆಟ್‌ಗಳು, 8 ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹4.53 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಪ್ರಾಕ್ಸಿ ಖಾತೆಗಳು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದರು. ಬಳಿಕ ವಾಟ್ಸಪ್ ಗುಂಪುಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಖರೀದಿದಾರರನ್ನು ಸಂಪರ್ಕಿಸಿ, ಲಾಗಿನ್ ವಿವರಗಳನ್ನು ಹಂಚುವ ಮೂಲಕ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು.

ಪೊಲೀಸರು ಈಗಾಗಲೇ ಈ ಸಂಬಂಧ 7 ಪ್ರಕರಣಗಳನ್ನು ದಾಖಲಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಈ ರೀತಿಯ ಕಾಳಬಜಾರ್ ಚಟುವಟಿಕೆಗಳನ್ನು ತಡೆಯಲು ‘ಎಂ ಟಿಕೇಟಿಂಗ್ ವ್ಯವಸ್ಥೆ ಸಹಾಯಕವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು