ಇಂದು ಏಪ್ರಿಲ್ 9, 2026, ಗುರುವಾರ ಚಿನ್ನಾಭರಣ ಪ್ರಿಯರಿಗೆ ಕೊಂಚ ಸಮಾಧಾನಕರ ಸುದ್ದಿ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತದ ನಡುವೆ ಇಂದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದೆ.
ಚಿನ್ನದ ಬೆಲೆ (Gold Price):

22 ಕ್ಯಾರಟ್ ಚಿನ್ನ (ಆಭರಣ ಬಂಗಾರ): ನಿನ್ನೆ 14,100 ರೂ. ಇದ್ದ 1 ಗ್ರಾಮ್ ಚಿನ್ನದ ಬೆಲೆ ಇಂದು 13,885 ರೂ. ಗೆ ಇಳಿಕೆಯಾಗಿದೆ. ಅಂದರೆ ಪ್ರತಿ ಗ್ರಾಮ್‌ಗೆ 215 ರೂ. ತಗ್ಗಿದೆ.
24 ಕ್ಯಾರಟ್ ಚಿನ್ನ (ಅಪರಂಜಿ ಬಂಗಾರ): ಇಂದು 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆ 15,148 ರೂ. ದಾಖಲಾಗಿದೆ.

ಬೆಳ್ಳಿ ಬೆಲೆ (Silver Price):
ಬೆಳ್ಳಿಯ ದರದಲ್ಲಿ ಇಂದು ಗ್ರಾಮ್‌ಗೆ 5 ರೂ. ಅಲ್ಪ ಇಳಿಕೆ ಕಂಡುಬಂದಿದೆ.

ಬೆಂಗಳೂರು ಮತ್ತು ಮುಂಬೈ: ಪ್ರತಿ ಗ್ರಾಮ್ ಬೆಳ್ಳಿ ಬೆಲೆ 255 ರೂ. ಇದೆ.
ಚೆನ್ನೈ: ಪ್ರತಿ ಗ್ರಾಮ್ ಬೆಳ್ಳಿ ಬೆಲೆ 260 ರೂ. ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

