ಕೇರಳ: ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಈ ಮನಮಿಡಿಯುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಸರಳತೆ ಮತ್ತು ಮಾನವೀಯ ಗುಣಕ್ಕೆ ಹೆಸರಾದ ಸಂಜು ಸ್ಯಾಮ್ಸನ್, ರಸ್ತೆ ಬದಿಯಲ್ಲಿ ಭೇಟಿಯಾದ ಅಭಿಮಾನಿಯೊಬ್ಬರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
ಸಂಜು ಸ್ಯಾಮ್ಸನ್ ಅವರು ಕೋಝಿಕ್ಕೋಡ್‌ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದಾಗ, ಫೋನ್ ಕರೆಯೊಂದಕ್ಕೆ ಉತ್ತರಿಸಲು ಪಾಲಕ್ಕಾಡ್‌ನ ಪುಂಚಪ್ಪಾಡಂ ಶಾಲೆಯ ಬಳಿ ತಮ್ಮ ಕಾರನ್ನು ನಿಲ್ಲಿಸಿದ್ದರು.ಈ ವೇಳೆ ಕೇಬಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ಶಬರೀಶ್ ಎಂಬ ಅಭಿಮಾನಿ ಸಂಜು ಅವರನ್ನು ಗುರುತಿಸಿ ಸೆಲ್ಫಿ ಕೇಳಿದ್ದಾರೆ. ಶಬರೀಶ್ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ, ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದು ಹೋಗಿರುವುದನ್ನು ಸಂಜು ಗಮನಿಸಿದರು.

ಇದನ್ನೂ ಓದಿ: “ದೇವರು ಕೊಟ್ಟ ಮರುಜನ್ಮ!”: ನಯಂಡಹಳ್ಳಿಯಲ್ಲಿ ಮೊದಲ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಬದುಕಿದ ಮಗು
ಇಲ್ಲಿದೆ ನೋಡಿ ಪೋಸ್ಟ್:

SANJU SAMSON – A Heart of Gold 🥹
Sanju is in Kerala right now to cast his vote for the upcoming state elections. A fan boy met him and tried to click a selfie. Sanju noticed that his phone had display lines on it and asked him what happened to his phone. The boy said he… pic.twitter.com/eNwsBORVnK
— Deepu (@deepu_drops) April 8, 2026
“ನಿನ್ನ ಫೋನ್ ಡಿಸ್‌ಪ್ಲೇ ಹಾಳಾಗಿದೆ” ಎಂದು ಹೇಳಿದ ಸಂಜು, ಕೂಡಲೇ ತಮ್ಮ ಕಾರಿನ ಹಿಂದಿನ ಸೀಟ್‌ನಲ್ಲಿದ್ದ ಸುಮಾರು 40,000 ರೂ. ಬೆಲೆಯ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಶಬರೀಶ್‌ಗೆ ಉಡುಗೊರೆಯಾಗಿ ನೀಡಿದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


