IPL: ಕೋಲ್ಕತ್ತ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಗೆಲುವು

IPL CSK vs KKR Match

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕೋಲ್ಕತ್ತ ನೈಟ್ ರೈಡರ್ಸ್ (KKR) ವಿರುದ್ಧ 32 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ತಂಡದ ಪರ ಸಂಜು ಸ್ಯಾಮ್ಸನ್ 48 ರನ್‌ಗಳೊಂದಿಗೆ ಪ್ರಮುಖ ಕೊಡುಗೆ ನೀಡಿದರೆ, ಆಯುಷ್ ಮ್ಹಾತ್ರೆ 38, ಡೆವಾಲ್ಡ್ ಬ್ರೆವಿಸ್ 41 ಹಾಗೂ ಸರ್ಫರಾಜ್ ಖಾನ್ 23 ರನ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಶಿವಂ ದುಬೆ (13*) ಮತ್ತು ಜೇಮೀ ಓವರ್ಟನ್ (7*) ಅಂತ್ಯದಲ್ಲಿ ತಂಡಕ್ಕೆ ಬೆಂಬಲ ನೀಡಿದರು.

ಇದನ್ನೂ ಓದಿ: ಟಿ20 ಸರಣಿ: 15ರ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ? ಸಚಿನ್ ದಾಖಲೆ ಬ್ರೇಕ್‌ ಸಾಧ್ಯತೆ

ಕೋಲ್ಕತ್ತ ಪರ ಕಾರ್ತಿಕ್ ತ್ಯಾಗಿ 2 ವಿಕೆಟ್ ಪಡೆದರೆ, ಅನುಕೂಲ್ ರಾಯ್, ವೈಭವ್ ಅರೋರಾ ಹಾಗೂ ಸುನಿಲ್ ನರೈನ್ ತಲಾ 1 ವಿಕೆಟ್ ಕಬಳಿಸಿದರು.

193 ರನ್‌ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡ, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 160 ರನ್‌ಗಳಿಗೆ ಸೀಮಿತವಾಯಿತು. ತಂಡದ ಪರ ರಮನ್ದೀಪ್ ಸಿಂಗ್ 35 ಹಾಗೂ ರೊವ್ಮನ್ ಪೊವೆಲ್ 31 ರನ್‌ಗಳೊಂದಿಗೆ ಹೋರಾಟ ನಡೆಸಿದರೂ, ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಅಜಿಂಕ್ಯ ರಹಾನೆ 28, ಅಂಗ್‌ಕ್ರಿಶ್ ರಘುವಂಶಿ 27 ರನ್‌ಗಳ ಕೊಡುಗೆ ನೀಡಿದರು.

ಚೆನ್ನೈ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದು ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಅನ್ಶುಲ್ ಕಾಂಬೋಜ್ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಅಕೇಲ್ ಹೋಸೇನ್ ತಲಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು