ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ, 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳನ್ನು ಕಲೆಹಾಕಿತು. ತಂಡದ ಪರ ಮಿಚೆಲ್ ಮಾರ್ಷ್ 40 ರನ್, ಆಯುಷ್ ಬಡೋನಿ 38 ರನ್, ಮುಕುಲ್ ಚೌಧರಿ 39 ರನ್ ಗಳಿಸಿ ಹೋರಾಟ ನೀಡಿದರು.

ಇತರ ಬ್ಯಾಟ್ಸ್‌ಮನ್‌ಗಳಲ್ಲಿ ಐಡೆನ್ ಮಾರ್ಕ್ರಾಮ್ 12, ಜಾರ್ಜ್ ಲಿಂಡೆ 7, ಆವೇಶ್ ಖಾನ್ 1 ರನ್ ಗಳಿಸಿದರೆ, ರಿಷಭ್ ಪಂತ್ ಹಾಗೂ ನಿಕೋಲಸ್ ಪೂರನ್ ತಲಾ 1 ರನ್‌ಗೆ ಔಟಾದರು. ಮೊಹಮ್ಮದ್ ಶಮಿ ಮತ್ತು ಅಬ್ದುಲ್ ಸಮದ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ದಿಗ್ವೇಶ್ ರಥಿ ಔಟಾಗದೆ ಉಳಿದರು.
ಇದನ್ನೂ ಓದಿ: IPL: ಕೋಲ್ಕತ್ತ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು

ಆರ್‌ಸಿಬಿ ಪರ ರಾಸಿಖ್ ಸಲಾಂ 4 ವಿಕೆಟ್ ಪಡೆದು ಮಿಂಚಿದರೆ, ಕೃನಾಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಪಡೆದರು. ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಕಬಳಿಸಿದರು.
147 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ, 15.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್‌ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ವಿರಾಟ್ ಕೊಹ್ಲಿ 49 ರನ್‌ಗಳೊಂದಿಗೆ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.
ರಜತ್ ಪಾಟೀದಾರ್ 27 ರನ್ ಹಾಗೂ ಜಿತೇಶ್ ಶರ್ಮಾ 23 ರನ್ ನೆರವಿನಿಂದ ತಂಡ ಗೆಲುವಿನ ದಡ ಸೇರಿತು. ಅಂತಿಮ ಹಂತದಲ್ಲಿ ಟಿಮ್ ಡೇವಿಡ್ 14* ಹಾಗೂ ರೊಮಾರಿಯೊ ಶೆಫರ್ಡ್ 14* ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಫಿಲ್ ಸಾಲ್ಟ್ 7 ಹಾಗೂ ದೇವದತ್ ಪಡಿಕ್ಕಲ್ 10 ರನ್ ಗಳಿಸಿದರು.
ಲಕ್ನೋ ಪರ ಪ್ರಿನ್ಸ್ ಯಾದವ್ 3 ವಿಕೆಟ್ ಪಡೆದರೆ, ಆವೇಶ್ ಖಾನ್ 2 ವಿಕೆಟ್ ಕಬಳಿಸಿದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

