ದೇಶದಲ್ಲೇ ಅತ್ಯಂತ ಹೆಚ್ಚು ಡಿಮ್ಯಾಂಡ್ ಇರುವ ರೈಲು ‘ಪರಶುರಾಮ್ ಎಕ್ಸ್‌ಪ್ರೆಸ್’: ಕೇರಳ-ಕರ್ನಾಟಕ ಮಾರ್ಗದಲ್ಲಿ ಪ್ರಯಾಣಿಕರ ಅಬ್ಬರ!

ತಿರುವನಂತಪುರಂ: ಕನ್ಯಾಕುಮಾರಿಯಿಂದ ಮಂಗಳೂರಿಗೆ ಸಂಚರಿಸುವ ಪರಶುರಾಮ್ ಎಕ್ಸ್‌ಪ್ರೆಸ್ (Parasuram Express) ಈಗ ಭಾರತದ ಅತ್ಯಂತ ಹೆಚ್ಚು ಜನದಟ್ಟಣೆ ಹೊಂದಿರುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಯ್ದಿರಿಸಿದ ಸೀಟುಗಳ ಬುಕ್ಕಿಂಗ್ ಅಂಕಿಅಂಶಗಳ ಪ್ರಕಾರ, ಈ ರೈಲು ದಾಖಲೆಯ 267.67% ಆಕ್ಯುಪೆನ್ಸಿಯನ್ನು (Occupancy) ಹೊಂದಿದೆ.

ಪರಶುರಾಮ್ ಎಕ್ಸ್‌ಪ್ರೆಸ್‌ನಲ್ಲಿನ ದಟ್ಟಣೆ ಎಷ್ಟಿದೆ ಎಂದರೆ, ಸರಾಸರಿಯಾಗಿ ಕಾಯ್ದಿರಿಸಿದ ಒಂದು ಸೀಟಿಗೆ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದು ದತ್ತಾಂಶಗಳು ತಿಳಿಸಿವೆ.ಭಾರತದ ಟಾಪ್ 10 ಅತ್ಯಂತ ಜನದಟ್ಟಣೆಯ ರೈಲುಗಳ ಪೈಕಿ 8 ರೈಲುಗಳು ಕೇರಳ ರಾಜ್ಯದ ರೈಲು ಕಾರಿಡಾರ್‌ಗಳಲ್ಲಿ ಚಲಿಸುತ್ತಿವೆ. ಮಂಗಳೂರು-ಕನ್ಯಾಕುಮಾರಿ ಪರಶುರಾಮ್ ಎಕ್ಸ್‌ಪ್ರೆಸ್, ತಿರುವನಂತಪುರಂ-ನವದೆಹಲಿ ಕೇರಳ ಎಕ್ಸ್‌ಪ್ರೆಸ್ ಮತ್ತು ಕನ್ಯಾಕುಮಾರಿ-ಕತ್ರಾ ಹಿಮಸಾಗರ್ ಎಕ್ಸ್‌ಪ್ರೆಸ್ ಈ ಪಟ್ಟಿಯಲ್ಲಿ ಪ್ರಮುಖವಾಗಿವೆ.

Advertisement

ಇದನ್ನೂ ಓದಿ: ಸಂಸತ್ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ಮಹಿಳಾ ಮೀಸಲಾತಿ ವಿಧೇಯಕ ಮಂಡನೆ; ಬಿಜೆಪಿ ಸಂಸದರಿಗೆ ಕಡ್ಡಾಯ ಹಾಜರಾತಿ ವಿಪ್ ಜಾರಿ!

ಸೆಮಿ ಹೈಸ್ಪೀಡ್ ರೈಲುಗಳ ಪಟ್ಟಿಯಲ್ಲೂ ಕೇರಳ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಕಲ್ಪಿಸುವ ರೈಲುಗಳೇ ಮುಂದಿವೆ. ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 187.78% ಆಕ್ಯುಪೆನ್ಸಿಯೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಅತಿ ಹೆಚ್ಚು ಬೇಡಿಕೆಯಿರುವ 10 ರೈಲುಗಳಲ್ಲಿ 6 ರೈಲುಗಳನ್ನು ದಕ್ಷಿಣ ರೈಲ್ವೆ (Southern Railway) ನಿರ್ವಹಿಸುತ್ತಿದೆ.

Advertisement

ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು