IPL: 100 ವಿಕೆಟ್ ಕ್ಲಬ್ ಸೇರಿದ ಅರ್ಶದೀಪ್ ಸಿಂಗ್: ಇವರೇ ನೋಡಿ ದಾಖಲೆ ಬರೆದ ಇತರೆ ಎಡಗೈ ಶೂರರು

ಭಾರತದ ಎಡಗೈ ವೇಗದ ಬೌಲರ್ ಅರ್ಶದೀಪ್ ಸಿಂಗ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ 100 ವಿಕೆಟ್ ಸಾಧನೆ ಮಾಡಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಅರ್ಶದೀಪ್, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಿಯಾನ್ ರಿಕ್ಕೆಲ್ಟನ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಏಪ್ರಿಲ್ 16ರಂದು ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಕಬಳಿಸಿ, ಐಪಿಎಲ್‌ನಲ್ಲಿ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು 102ಕ್ಕೆ ಹೆಚ್ಚಿಸಿದರು. ಈ ಮೂಲಕ ಅವರು ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ಎಡಗೈ ವೇಗದ ಬೌಲರ್‌ಗಳ ಪಟ್ಟಿಗೆ ಸೇರಿದ್ದಾರೆ.

Advertisement

ಇದನ್ನೂ ಓದಿ: IPL: ಫಲಿಸದ ಡಿ ಕಾಕ್ ಶತಕ, ‘ಸಿಂಗ್’ ಪಂಚಾಬ್ ‘ಕಿಂಗ್’; ಮುಂಬೈಗೆ ಸೋಲು

ಅರ್ಶದೀಪ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಭರವಸೆಯ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರು ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ.

Advertisement

ಐಪಿಎಲ್‌ನಲ್ಲಿ ಎಡಗೈ ವೇಗದ ಬೌಲರ್‌ಗಳ ಪೈಕಿ ಟ್ರಂಟ್ ಬೋಲ್ಟ್ ಅತ್ಯಧಿಕ ವಿಕೆಟ್ ಪಡೆದವರು. ಬೋಲ್ಟ್ 122 ಪಂದ್ಯಗಳಲ್ಲಿ 144 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಯದೇವ್ ಉನದ್ಕಟ್ 116 ಪಂದ್ಯಗಳಲ್ಲಿ 114 ವಿಕೆಟ್ ಪಡೆದಿದ್ದಾರೆ. ಮಾಜಿ ವೇಗಿ ಆಶಿಷ್ ನೆಹ್ರಾ 88 ಪಂದ್ಯಗಳಲ್ಲಿ 106 ವಿಕೆಟ್‌ಗಳನ್ನು ಕಬಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಎಡಗೈ ವೇಗಿ ಜಹೀರ್ ಖಾನ್ ಐಪಿಎಲ್‌ನಲ್ಲಿ 100 ಪಂದ್ಯಗಳಲ್ಲಿ ಕಣಕ್ಕಿಳಿದು 102 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಅರ್ಶದೀಪ್ ಸಿಂಗ್ ಕೂಡ ಅದೇ ಮಟ್ಟದ ಸಾಧನೆ ಮಾಡಿ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು