ಅಮೆರಿಕದಲ್ಲಿ H-1B ವೀಸಾ ಮತ್ತು ಭಾರತೀಯ ವೃತ್ತಿಪರರ ಬಗ್ಗೆ ಚರ್ಚೆಗಳು ಸಾಮಾನ್ಯವಾಗಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕುತ್ತವೆ. ಇತ್ತೀಚೆಗೆ ಟೆಕ್ಸಾಸ್‌ನ ನಗರಸಭೆ ಸಭೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಭಾರತೀಯ ಮೂಲದ ಅಮೆರಿಕನ್ ಕಾರ್ಯಕರ್ತೆ ನೇಹಾ ಸುರತ್ರಾನ್ ಅವರು ಫ್ರಿಸ್ಕೋ ನಗರಸಭೆ ಸಭೆಯಲ್ಲಿ ಭಾರತ ವಿರೋಧಿ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅವರು ಭಾರತೀಯ ವೃತ್ತಿಪರರು ಸ್ಥಳೀಯ ಸಮುದಾಯಕ್ಕೆ ಅಪಾಯಕಾರಿಗಳು ಎಂಬ ಆರೋಪಗಳನ್ನು ಖಂಡಿಸಿದರು.
ಇದನ್ನೂ ಓದಿ ʼಟ್ವಿಂಕಲ್ ಟ್ವಿಂಕಲ್ʼ ಕಲಿಯುವ ಮಕ್ಕಳ ಶಾಲಾ ಶುಲ್ಕ 2.25 ಲಕ್ಷ!

ನೇಹಾ ಸುರತ್ರಾನ್ ತಮ್ಮ ಮಾತಿನಲ್ಲಿ ಅಂಕಿ-ಅಂಶಗಳನ್ನು ಉಲ್ಲೇಖಿಸಿ “ಸಾಂಖ್ಯಿಕವಾಗಿ ಭಾರತೀಯ ಸಮುದಾಯವು ಹೆಚ್ಚಿನ ಶಿಕ್ಷಣ, ಹೆಚ್ಚಿನ ಆದಾಯ ಮತ್ತು ಕಡಿಮೆ ಅಪರಾಧ ಪ್ರಮಾಣದೊಂದಿಗೆ ಸಂಬಂಧಿಸಿದೆ. “ನಿಮ್ಮ ಮಕ್ಕಳಿಗೆ ಸುರಕ್ಷಿತ ಪ್ರದೇಶ, ಉತ್ತಮ ಶಾಲೆಗಳು ಮತ್ತು ಸ್ಥಿರ ಸಮುದಾಯ ಬೇಕೆಂದರೆ, ಇದು ಭಯಪಡುವ ವಿಷಯವಲ್ಲ, ಸ್ವಾಗತಿಸಬೇಕಾದದ್ದು” ಎಂದರು.
ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ವ್ಯಕ್ತವಾದ ಆತಂಕಗಳಿಗೆ ಉತ್ತರವಾಗಿ ಅವರು “ನಾವು ಕೂಡ ಥ್ಯಾಂಕ್ಸ್‌ಗಿವಿಂಗ್ ಮತ್ತು ಕ್ರಿಸ್‌ಮಸ್ ಆಚರಿಸುತ್ತೇವೆ. ನಾವು ಯಾರ ಮೇಲೂ ನಮ್ಮ ಧರ್ಮವನ್ನು ಹೇರಿಕೆ ಮಾಡುತ್ತಿಲ್ಲ. ಹಿಂದೂ ಧರ್ಮದಲ್ಲಿ ಬಲವಂತದ ಮತಾಂತರವಿಲ್ಲ. ಒಳ್ಳೆಯ ವ್ಯಕ್ತಿಯಾಗಿದ್ದರೆ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ.” ಎಂದು ಹೇಳಿದರು.

ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

