ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ 100% ಫಲಿತಾಂಶ; ಪೂರ್ವಿಕಾ ಎಸ್ 607 ಅಂಕಗಳೊಂದಿಗೆ ಟಾಪರ್

SSLC Result 2026

ಪುತ್ತೂರು: ಏಪ್ರಿಲ್ 2026ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ಭರ್ಜರಿ ಸಾಧನೆ ಮಾಡಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 66 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಈ ಸಾಧನೆ ಮಾಡಿದ್ದಾರೆ. ಶಾಲೆಗೆ “ಎ” ಗ್ರೇಡ್ ಲಭಿಸಿದ್ದು, ಗುಣಾತ್ಮಕ ಫಲಿತಾಂಶ 84.73 ಆಗಿದೆ.

ಕನ್ನಡ ಮಾಧ್ಯಮದಲ್ಲಿ ಬಿಂದುಶ್ರೀ (593 ಅಂಕ) ಪ್ರಥಮ ಸ್ಥಾನ ಪಡೆದರೆ, ನಾಗಮ್ಮ (576) ದ್ವಿತೀಯ ಹಾಗೂ ಪೂರ್ಣಶ್ರೀ (573) ತೃತೀಯ ಸ್ಥಾನ ಗಳಿಸಿದ್ದಾರೆ. ಶ್ರೇಣಿ ವಿವರ: ಎ+ : 5, ಎ : 7, ಬಿ+ : 19, ಬಿ : 17, ಸಿ+ : 12, ಸಿ : 6

Advertisement

SSLC Result 2026

ಆಂಗ್ಲ ಮಾಧ್ಯಮ ಫಲಿತಾಂಶ

ಆಂಗ್ಲ ಮಾಧ್ಯಮದಲ್ಲಿ 43 ವಿದ್ಯಾರ್ಥಿಗಳಲ್ಲಿ 42 ಮಂದಿ ಉತ್ತೀರ್ಣರಾಗಿ ಶೇ. 97.08 ಫಲಿತಾಂಶ ದಾಖಲಿಸಿದೆ. ಪೂರ್ವಿಕಾ ಎಸ್ 607 ಅಂಕಗಳೊಂದಿಗೆ ಶಾಲಾ ಪ್ರಥಮ ಸ್ಥಾನ ಪಡೆದಿದ್ದಾರೆ. ಲಿತೇಶ್ ಕೆ (589) ದ್ವಿತೀಯ ಹಾಗೂ ಶ್ರವಣ್ ಎಂ (588) ತೃತೀಯ ಸ್ಥಾನ ಗಳಿಸಿದ್ದಾರೆ. ಶ್ರೇಣಿ ವಿವರ: ಎ+ : 12, ಎ : 9, ಬಿ+ : 16, ಬಿ : 2, ಸಿ+ : 2, ಸಿ : 1

Advertisement

ಇದನ್ನೂ ಓದಿ: SSLC ಫಲಿತಾಂಶ 2026: ಜಿಲ್ಲಾವಾರು ರ್ಯಾಂಕಿಂಗ್ ಪಟ್ಟಿ ಬಿಡುಗಡೆ; ರಾಜ್ಯಕ್ಕೆ ದಕ್ಷಿಣ ಕನ್ನಡ ನಂ.1, ಉಡುಪಿಗೆ 2ನೇ ಸ್ಥಾನ!

ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳು

ಮೋಕ್ಷಿತ್ ಕೆ (583), ಪ್ರಹ್ಲಾದ್ ಗೌಡ ಪಿ (578), ಭವಿತಾ ಡಿ (578), ಶ್ರೇಯಸ್ ಎಸ್ (577), ಆಶಿಶ್ ಶೆಟ್ಟಿ (574), ಸಮೀಕ್ಷಾ ಯು (572), ಡಿ ಕಾರುಣ್ಯ (568), ಹರ್ಷಿಣಿ ಗೌಡ (568), ಮನ್ವಿತ್ ಕುಮಾರ್ (565), ಪ್ರೇರಣ್ ವಿ ಗೌಡ (563), ವೀಕ್ಷಣ್ ಪಿ ವಿ (563), ಅಭಿನ್ ಬಿ ಎ (560), ಸಾನಿಕಾ ಎಂ ಆರ್ (560), ಜೀವಿತ್ (559), ಶ್ರೀವತ್ಸ ಕೆ ಎಸ್ (558), ಪ್ರಜ್ವಿತಾ (554), ಪ್ರಥಮ್ ಜೆ ಎಸ್ (545), ಸಂಭ್ರಮ್ ರೈ (545), ರಕ್ಷಿತಾ (543), ಮನೀಷ್ ವಿ (537), ಕಿಶನ್ (533), ಲಿಖಿತಾ ಎಂ (532) ಸೇರಿದಂತೆ ಅನೇಕರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಹಾಗೂ ಪ್ರಭಾರ ಮುಖ್ಯೋಪಾಧ್ಯಾಯರಾದ ಗಾಯತ್ರಿ ಎಸ್ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಶಿಕ್ಷಕರ ಪರಿಶ್ರಮ ಮತ್ತು ಪೋಷಕರ ಸಹಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು