ಮುಂಬೈ ಕ್ಲಬ್‌ನಲ್ಲಿ ರಕ್ತಸಿಕ್ತವಾದ ‘ಸ್ಪ್ಲಿಟ್ಸ್‌ವಿಲ್ಲಾ’ ಸುಂದರಿ! ಹಲ್ಲು ಮುರಿದು ಮುಖ ಊದಿಕೊಂಡ ನಟಿ ಪ್ರೀತ್ ಸಿಂಗ್; ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!

ಮುಂಬೈ: ಖ್ಯಾತ ರಿಯಾಲಿಟಿ ಶೋ ‘ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16’ ರ ಸ್ಪರ್ಧಿ ಪ್ರೀತ್ ಸಿಂಗ್ ಅವರಿಗೆ ಮುಂಬೈನ ಕ್ಲಬ್‌ವೊಂದರಲ್ಲಿ ಆಘಾತಕಾರಿ ಅನುಭವವಾಗಿದ್ದು, ಅಪರಿಚಿತರ ಗುಂಪೊಂದು ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದೆ. ಈ ಘಟನೆಯಲ್ಲಿ ನಟಿಯ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಅವರ ಹಲ್ಲುಗಳು ಮುರಿದಿವೆ.

ಘಟನೆಯ ನಂತರ ಪ್ರೀತ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಮುಖ ಊದಿಕೊಂಡಿದ್ದು, ಗಾಯಗಳಿಂದ ರಕ್ತ ಬರುತ್ತಿರುವುದು ಕಾಣಿಸುತ್ತದೆ. “ಈ ವೀಡಿಯೊ ಬರೆಯುವಾಗಲೂ ನನ್ನ ದೇಹ ನಡುಗುತ್ತಿದೆ. ಮುಂಬೈ ಹುಡುಗಿಯರಿಗೆ ಸುರಕ್ಷಿತವಲ್ಲ ಎಂದು ಕೇಳಿದ್ದೆ, ಆದರೆ ನನಗೇ ಈ ಅನುಭವವಾಗುತ್ತದೆ ಎಂದು ಊಹಿಸಿರಲಿಲ್ಲ” ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

 

View this post on Instagram

 

A post shared by preet❤️ (@preetsingh.fit)

ಕ್ಲಬ್‌ಗೆ ಬಂದ ಒಬ್ಬ ಅಪರಿಚಿತ ಯುವತಿ, ಪ್ರೀತ್ ಮತ್ತು ಅವರ ಸ್ನೇಹಿತೆಯನ್ನು ಉದ್ದೇಶಿಸಿ “ಇವರನ್ನು ಒಳಗೆ ಹೇಗೆ ಬಿಡಲಾಗಿದೆ?” ಎಂದು ಜೋರಾಗಿ ಕೂಗಾಡಿ ಜಗಳ ಆರಂಭಿಸಿದ್ದಾಳೆ.ಈ ಸಣ್ಣ ಜಗಳ ವಿಕೋಪಕ್ಕೆ ತಿರುಗಿದಾಗ, ಆ ಯುವತಿಯ ಸ್ನೇಹಿತರು ಮಧ್ಯಪ್ರವೇಶಿಸಿ ಪ್ರೀತ್ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ನಡೆದ ಹಲ್ಲೆಯಲ್ಲಿ ನಟಿಯ ಹಲ್ಲುಗಳು ಮುರಿದುಹೋಗಿದ್ದು, ಮುಖ ವಿರೂಪಗೊಂಡಿದೆ.

ಇದನ್ನೂ ಓದಿ:ವೈರಲ್ ಸುಂದರಿ ಮೊನಾಲಿಸಾಗೆ ಶಾಕ್ ನೀಡಿದ ನಿರ್ದೇಶಕ! ನಟಿಸುತ್ತಿದ್ದ ಮೊದಲ ಸಿನಿಮಾವೇ ರದ್ದು

ನಟಿಯ ಈ ಸ್ಥಿತಿಯನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೆಲೆಬ್ರಿಟಿಗಳಿಗೇ ಇಂತಹ ಪರಿಸ್ಥಿತಿ ಎದುರಾದರೆ ಸಾಮಾನ್ಯ ಹೆಣ್ಣುಮಕ್ಕಳ ಗತಿ ಏನು? ಎಂದು ಅನೇಕರು ಪ್ರಶ್ನಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು