ಮಾನವೀಯತೆ ಮೆರೆದ ಡೆಲಿವರಿ ಬಾಯ್: ಬಾಗಿಲು ತೆರೆದಿದ್ದ ಮನೆಗೆ ‘ಕಾವಲುಗಾರ’ನಾದ ಅಮ್ಜದ್; ಮಾಲೀಕರು ಫುಲ್ ಫಿದಾ!

ಪಾರ್ಸೆಲ್ ನೀಡಲು ಬಂದ ವ್ಯಕ್ತಿಯೊಬ್ಬರು ತೆರೆದಿದ್ದ ಮನೆಯ ಬಾಗಿಲನ್ನು ನೋಡಿ ಕಳ್ಳತನವಾಗದಂತೆ ಮತ್ತು ಸಾಕುಪ್ರಾಣಿ ಓಡಿಹೋಗದಂತೆ ಕಾವಲು ನಿಂತು ಪ್ರಾಮಾಣಿಕತೆ ಮೆರೆದ ಘಟನೆ ವರದಿಯಾಗಿದೆ. ದಿವ್ಯಾ ಉನ್ನಿ ಎಂಬುವವರ ಮನೆಯ ಬಳಿ ಡೆಲಿವರಿ ನೀಡಲು ಬಂದ ಅಮ್ಜದ್ ಎಂಬುವವರೇ ಈ ಕಾರ್ಯದ ಮೂಲಕ ಎಲ್ಲರ ಮನ ಗೆದ್ದ ವ್ಯಕ್ತಿ.

ಮನೆಯ ಮಾಲೀಕರಾದ ದಿವ್ಯಾ ಉನ್ನಿ ಅವರು ಯಾವುದೋ ಗಡಿಬಿಡಿಯಲ್ಲಿ ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದರು. ಅಮ್ಜದ್ ಪಾರ್ಸೆಲ್ ನೀಡಲು ಬಂದಾಗ ಬಾಗಿಲು ತೆರೆದಿರುವುದನ್ನು ಗಮನಿಸಿದರು. ಮೊದಲು ಮಾಲೀಕರು ಒಳಗಿದ್ದಾರೆ ಎಂದು ಭಾವಿಸಿದರೂ, ಯಾರೂ ಇಲ್ಲವೆಂದು ತಿಳಿದ ಮೇಲೆ ಅವರು ಆತಂಕಕ್ಕೊಳಗಾದರು. ಮನೆಯೊಳಗೆ ಸಾಕಿದ ಬೆಕ್ಕು ಇರುವುದನ್ನು ಗಮನಿಸಿದ ಅವರು, ಅದು ಹೊರಗೆ ಓಡಿ ಹೋಗಬಹುದು ಅಥವಾ ಕಳ್ಳರು ನುಗ್ಗಬಹುದು ಎಂದು ಯೋಚಿಸಿದರು.

ಅಮ್ಜದ್ ಅವರು ಮೊದಲು ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯೊಳಗಿನ ಟೇಬಲ್ ಮೇಲೆ ಇರಿಸಿದರು. ನಂತರ ದಿವ್ಯಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅಷ್ಟಕ್ಕೇ ಸುಮ್ಮನಾಗದ ಅವರು, ದಿವ್ಯಾ ಅವರು ಮನೆಗೆ ಬರುವವರೆಗೂ ಸುಮಾರು ಹೊತ್ತು ಬೇರೆಲ್ಲೂ ಹೋಗದೆ ಮನೆಯ ದ್ವಾರದ ಬಳಿಯೇ ‘ಸೆಕ್ಯೂರಿಟಿ ಗಾರ್ಡ್’ ತರಹ ಕಾವಲು ನಿಂತರು.

ಇದನ್ನೂ ಓದಿ:ಹೈದರಾಬಾದ್‌: ಸೊಳ್ಳೆ ಪರದೆ ಒಳಗೆ ಕುಳಿತುಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್; ವಿಡಿಯೋ ವೈರಲ್

ಮನೆಗೆ ಬಂದ ದಿವ್ಯಾ ಅವರು ಅಮ್ಜದ್ ಅವರ ಈ ಪ್ರಾಮಾಣಿಕತೆ ಕಂಡು ಭಾವುಕರಾದರು. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಬೆಕ್ಕು ಓಡಿಹೋಗದಂತೆ ಮತ್ತು ಮನೆಯನ್ನು ಕಾಯುತ್ತಿದ್ದ ಅವರ ಪ್ರಾಮಾಣಿಕತೆ ಕಂಡು ಖುಷಿಯಾಗಿದೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಡೆಲಿವರಿ ಕಂಪನಿಯು ಅಮ್ಜದ್ ಅವರಿಗೆ ಹೆಚ್ಚಿನ ವೇತನ ಅಥವಾ ಬೋನಸ್ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು