ಸುಡುವ ಬಿಸಿಲಿನಲ್ಲಿ ಒಂದು ಲೋಟ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಸಿಗುವ ನೆಮ್ಮದಿಯೇ ಬೇರೆ. ಆದರೆ, ಈ ಸಿಹಿಯಾದ ಪಾನೀಯವು ಎಲ್ಲರಿಗೂ ಸುರಕ್ಷಿತವಲ್ಲ. ಗುರುಗ್ರಾಮದ ನಾರಾಯಣ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಹಿರಿಯ ಸಮಾಲೋಚಕರಾದ ಡಾ. ಮುಖೇಶ್ ನಂದಾಲ್ ಅವರು ಕಬ್ಬಿನ ಹಾಲಿನ ಸೇವನೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಯಾರಿಗೆ ಅಪಾಯ?

ಮಧುಮೇಹಿಗಳು: ಕಬ್ಬಿನ ಹಾಲಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಿರುತ್ತದೆ ಮತ್ತು ಅದರಲ್ಲಿ ನಾರಿನಂಶ (fibre) ಇರುವುದಿಲ್ಲ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತಕ್ಷಣವೇ ಏರಿಕೆಯಾಗುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ಇದು ಅಪಾಯಕಾರಿ.
ಬೊಜ್ಜು ಮತ್ತು ಫ್ಯಾಟಿ ಲಿವರ್ ಸಮಸ್ಯೆ ಇರುವವರು: ಅಧಿಕ ಸಕ್ಕರೆಯು ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗಬಹುದು ಮತ್ತು ಚಯಾಪಚಯ ಕ್ರಿಯೆಗೆ ಅಡ್ಡಿಪಡಿಸಬಹುದು.

ತೂಕ ಇಳಿಸುವವರು: ಇದರಲ್ಲಿ ಕ್ಯಾಲೊರಿ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ತೂಕ ಇಳಿಸುವ ಯೋಜನೆಯಲ್ಲಿರುವವರು ಇದನ್ನು ತಪ್ಪಿಸುವುದು ಉತ್ತಮ.
ನೈರ್ಮಲ್ಯದ ಕೊರತೆ ಮತ್ತು ಸೋಂಕುಗಳು:
ಕಬ್ಬಿನ ಹಾಲು ತಯಾರಿಸುವ ವಿಧಾನವೂ ಪ್ರಮುಖವಾಗಿದೆ. ಸರಿಯಾದ ಸ್ವಚ್ಛತೆ ಇಲ್ಲದಿದ್ದರೆ ಈ ಕೆಳಗಿನ ಸಮಸ್ಯೆಗಳು ಎದುರಾಗಬಹುದು:
ನೀರು ಮತ್ತು ಆಹಾರದಿಂದ ಹರಡುವ ಕಾಯಿಲೆಗಳು: ಕಬ್ಬಿನ ಹಾಲಿನ ಮೆಷಿನ್, ಬಳಸುವ ಗ್ಲಾಸ್ ಅಥವಾ ಐಸ್ (Ice) ಕಲುಷಿತವಾಗಿದ್ದರೆ ಟೈಫಾಯಿಡ್, ಕಾಲರಾ ಮತ್ತು ಹೆಪಟೈಟಿಸ್‌ನಂತಹ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಫ್ರಿಡ್ಜ್ ನೀರಿಗಿಂತ ಮಡಿಕೆ ನೀರೇ ಮೇಲು: ಆರೋಗ್ಯಕ್ಕಿದೆ ಹತ್ತಾರು ಲಾಭಗಳು!
ತಜ್ಞರ ಸಲಹೆ:
ಕಬ್ಬಿನ ಹಾಲನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ, ಆದರೆ ಕುಡಿಯುವ ಮುನ್ನ ಅಂಗಡಿಯ ನೈರ್ಮಲ್ಯವನ್ನು ಗಮನಿಸಿ. ಮಿತವಾಗಿ ಸೇವಿಸಿ ಮತ್ತು ಐಸ್ ಬಳಸುವಾಗ ಎಚ್ಚರಿಕೆ ಇರಲಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

