ಹೊಸ ಹಂದಿ ಜ್ವರ ಪ್ರಕರಣ ಪತ್ತೆ! ಹಂದಿಗಳ ಮಾರಣಹೋಮಕ್ಕೆ ಸೂಚನೆ

ಜಪಾನ್‌ನಲ್ಲಿ ಮತ್ತೆ ಹೊಸ ಕ್ಲಾಸಿಕಲ್ ಸ್ವೈನ್ ಫೀವರ್ (Classical Swine Fever) ಪ್ರಕರಣ ಪತ್ತೆಯಾಗಿದೆ. ಇದರ ಪರಿಣಾಮವಾಗಿ ಸುಮಾರು 3,000 ಹಂದಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ. ಈ ವರ್ಷದಲ್ಲಿ ದೇಶದಲ್ಲಿ ವರದಿಯಾದ ನಾಲ್ಕನೇ ಸ್ವೈನ್ ಫೀವರ್ ಪ್ರಕರಣ ಇದಾಗಿದೆ.

ಶಿಜುಓಕಾ ಪ್ರಿಫೆಕ್ಚರ್‌ನ ಫುಜಿನೋಮಿಯಾ ನಗರದ ಹಂದಿ ಫಾರ್ಮ್‌ನಲ್ಲಿ ಈ ಸೋಂಕು ಪತ್ತೆಯಾಗಿದ್ದು, ಕೆಲವು ಹಂದಿಮರಿಗಳ ಸಾವಿನ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿ ಪರೀಕ್ಷಿಸಿದಾಗ ವೈರಸ್ ದೃಢಪಟ್ಟಿದೆ.

ಇದನ್ನೂ ಓದಿ : ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು: ಮಮತಾ ಸರ್ಕಾರ ವಜಾ, ವಿಧಾನಸಭೆ ವಿಸರ್ಜನೆ

ಸೋಂಕು ಹರಡುವುದನ್ನು ತಡೆಯಲು ಫಾರ್ಮ್‌ನಲ್ಲಿರುವ ಎಲ್ಲಾ ಹಂದಿಗಳನ್ನು ಕೊಂದು, ಅವುಗಳನ್ನು ದಹನ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಸೋಂಕಿನ ಮೂಲ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ನಿಯೋಜಿಸಲಾಗಿದೆ.

ಕ್ಲಾಸಿಕಲ್ ಸ್ವೈನ್ ಫೀವರ್ ಮಾನವರಿಗೆ ಅಪಾಯಕಾರಿಯಲ್ಲ. ಆದರೆ ಹಂದಿ ಸಾಕಾಣಿಕೆಗೆ ಇದು ಭಾರೀ ಆರ್ಥಿಕ ನಷ್ಟ ಉಂಟುಮಾಡುವ ಸೋಂಕು ಇದಾಗಿದೆ . ಈ ವೈರಸ್ ಬಟ್ಟೆ, ಉಪಕರಣಗಳು ಮತ್ತು ಮಾಂಸ ಉತ್ಪನ್ನಗಳ ಮೂಲಕವೂ ಹರಡುವ ಸಾಧ್ಯತೆ ಇರುವುದರಿಂದ ಜಪಾನ್ ಸರ್ಕಾರ ಕಟ್ಟುನಿಟ್ಟಿನ ಜೈವ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು