ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ೫೬ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 82 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಆರಂಭದಲ್ಲಿ ಶುಬ್ಮನ್ ಗಿಲ್ ಕೇವಲ 5 ರನ್ಗಳಿಗೆ ಔಟ್ ಆದರೂ, ಸಾಯಿ ಸುದರ್ಶನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿ 61 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ 50 ರನ್ ಸೇರಿಸಿದರು.
ಇನ್ನೂ ಜೋಸ್ ಬಟ್ಲರ್ 7, ನಿಶಾಂತ್ ಸಿಂಧು 22, ಜಾಸನ್ ಹೋಲ್ಡರ್ 11 (ಅಜೇಯ) ರಾಹುಲ್ ಟಿವಟಿಯಾ 4 ರನ್ (ಅಜೇಯ) ಗಳಿಸಿದರು. ಹೈದರಾಬಾದ್ ಪರ ಸಕಿಬ್ ಹುಸೈನ್ ಹಾಗೂ ಪ್ರಫುಲ್ ಹಿಂಗೆ ತಲಾ 2 ವಿಕೆಟ್ ಪಡೆದರೆ, ನಾಯಕ ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IPL: ಅಕ್ಷರ್, ಮಿಲ್ಲರ್ ಸ್ಫೋಟಕ ಆಟಕ್ಕೆ ಗೆದ್ದ ಡೆಲ್ಲಿ; ಪಂಜಾಬ್ಗೆ ಸೋಲು
169 ರನ್ಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಟ್ರವಿಸ್ ಹೆಡ್ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಅಭಿಷೇಕ್ ಶರ್ಮಾ 6, ಇಶಾನ್ ಕಿಶನ್ 11, ಸ್ಮರಣ್ ರವಿಚಂದ್ರನ್ 9, ಹೆನ್ರಿಚ್ ಕ್ಲಾಸೆನ್ 14, ನಿತೀಶ್ ಕುಮಾರ್ ರೆಡ್ಡಿ 2 ರನ್ ಗಳಿಸಿ ನಿರಾಸೆ ಮೂಡಿಸಿದರು.
ಸಲಿಲ್ ಅರೋರಾ 16 ಹಾಗೂ ಪ್ಯಾಟ್ ಕಮ್ಮಿನ್ಸ್ 19 ರನ್ ಗಳಿಸಿದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಹೈದರಾಬಾದ್ ತಂಡ 14.5 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 86 ರನ್ಗಳಿಸಿತು.
ಗುಜರಾತ್ ಪರ ಕಗಿಸೊ ರಬಡಾ ಹಾಗೂ ಜಾಸನ್ ಹೋಲ್ಡರ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರೆ, ರಶೀದ್ ಖಾನ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


