IPL: ಅಕ್ಷರ್, ಮಿಲ್ಲರ್ ಸ್ಫೋಟಕ ಆಟಕ್ಕೆ ಗೆದ್ದ ಡೆಲ್ಲಿ; ಪಂಜಾಬ್‌ಗೆ ಸೋಲು

ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 3 ವಿಕೆಟ್ ಗಳ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್‌ಗಳನ್ನು ಕಲೆಹಾಕಿತು. ತಂಡದ ಪರ ಪ್ರಿಯಾನ್ಶ್ ಆರ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 56 ರನ್ ಗಳಿಸಿದರು.

ಶ್ರೇಯಸ್ ಅಯ್ಯರ್ ಅಜೇಯ 59 ರನ್ ಬಾರಿಸಿದರು. ಜೊತೆಗೆ ಕೂಪರ್ ಕಾನೋಲಿ 38, ಸೂರ್ಯಾಂಶ್ ಶೆಡ್ಜ್ ಅಜೇಯ 21 ರನ್ ಗಳಿಸಿದರು. ಪ್ರಭ್ಸಿಮ್ರಾನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 1 ರನ್ ಗಳಿಸಿ ಔಟ್ ಆದರು. ಶಶಾಂಕ್ ಸಿಂಗ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: IPL: ಮಾರ್ಷ್ ಬ್ಯಾಟ್‌ನಿಂದ ಸಿಡಿದ ಶತಕ, ಆರ್‌ಸಿಬಿ ವಿರುದ್ಧ ಗೆದ್ದ ಲಕ್ನೋ

ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಹಾಗೂ ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ 1 ವಿಕೆಟ್ ಕಬಳಿಸಿದರು.

211 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು. ತಂಡದ ಗೆಲುವಿನಲ್ಲಿ ನಾಯಕ ಅಕ್ಷರ್ ಪಟೇಲ್ 56 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರೆ, ಡೇವಿಡ್ ಮಿಲ್ಲರ್ 51 ರನ್ ಸಿಡಿಸಿದರು. ಅಶುತೋಷ್ ಶರ್ಮಾ 24, ಮಾಧವ್ ತಿವಾರಿ ಅಜೇಯ 18, ಔಕಿಬ್ ನಬಿ ಅಜೇಯ 10 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನೂ ಕೆಎಲ್ ರಾಹುಲ್ 9, ಅಭಿಷೇಕ್ ಪೋರೆಲ್ 5, ಸಾಹಿಲ್ ಪರಾಖ್ 13, ಟ್ರಿಸ್ಟನ್ ಸ್ಟಬ್ಸ್ 12 ರನ್ ಗಳಿಸಿ ಔಟ್ ಆದರು.

ಪಂಜಾಬ್ ಪರ ಅರ್ಶದೀಪ್ ಸಿಂಗ್ ಹಾಗೂ ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ ಮತ್ತು ಬೆನ್ ದ್ವಾರಶುಯಿಸ್ ತಲಾ 1 ವಿಕೆಟ್ ಪಡೆದುಕೊಂಡರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು