ಮೇಷ: ಇಂದು ನಿಮಗೆ ಅತ್ಯಂತ ಶಕ್ತಿಯುತ ದಿನ. ಹೊಸ ಯೋಜನೆಗಳನ್ನು ಮುನ್ನಡೆಸಲು ಇದು ಸಕಾಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಚಿನ್ನಾಭರಣ ಖರೀದಿಯ ಯೋಗವಿದೆ.
ವೃಷಭ: ಅನಿರೀಕ್ಷಿತ ಖರ್ಚುಗಳಿಂದ ದೂರವಿರುವುದು ಒಳಿತು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಾಂಧವ್ಯ ಉತ್ತಮಗೊಳ್ಳುತ್ತದೆ. ಹೊಸ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ.
ಮಿಥುನ: ಕೆಲಸದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಮಾತಿನ ಚಾತುರ್ಯದಿಂದ ವ್ಯವಹಾರಗಳನ್ನು ಕುದುರಿಸುವಿರಿ. ಆದಾಗ್ಯೂ, ಪ್ರೀತಿಪಾತ್ರರೊಂದಿಗೆ ಸಣ್ಣ ಪುಟ್ಟ ಮನಸ್ತಾಪಗಳು ಉಂಟಾಗಬಹುದು.
ಕರ್ಕಾಟಕ: ಉದ್ಯೋಗಾಕಾಂಕ್ಷಿಗಳಿಗೆ ಶುಭ ಕಾಲ. ಬಯಸಿದ ಕ್ಷೇತ್ರದಲ್ಲಿ ಅವಕಾಶಗಳು ಸಿಗಲಿವೆ. ಸಂಬಂಧಿಕರೊಂದಿಗೆ ವಿಚಾರ ವಿನಿಮಯ ಮಾಡುವಾಗ ತಾಳ್ಮೆಯಿಂದಿರಿ.
ಸಿಂಹ: ಆರೋಗ್ಯದಲ್ಲಿ ಏರುಪೇರಾಗಬಹುದು, ಜಾಗ್ರತೆ ವಹಿಸಿ. ಮನೆ ಅಥವಾ ಕಟ್ಟಡದ ಕೆಲಸಗಳು ಪೂರ್ಣಗೊಳ್ಳುವ ಹಂತಕ್ಕೆ ಬರಲಿವೆ. ದೂರ ಪ್ರಯಾಣದ ಸಾಧ್ಯತೆ ಇದೆ.
ಕನ್ಯಾ: ಅತಿಯಾದ ಆತ್ಮವಿಶ್ವಾಸ ಬೇಡ. ವಿದೇಶಿ ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ ಯಶಸ್ಸು ಸಿಗಲಿದೆ. ಹೊಸ ವಾಹನ ಖರೀದಿಯ ಬಗ್ಗೆ ಚಿಂತನೆ ನಡೆಸುವಿರಿ.
ತುಲಾ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಸಿಗಲಿದೆ. ಆಪ್ತ ಸ್ನೇಹಿತರ ಸಹಕಾರ ದೊರೆಯಲಿದೆ. ಬಿಳಿ ಬಣ್ಣ ಇಂದು ನಿಮಗೆ ಶುಭ ತರಲಿದೆ.
ವೃಶ್ಚಿಕ: ವೃತ್ತಿಜೀವನದಲ್ಲಿ ಪೈಪೋಟಿ ಎದುರಾಗಬಹುದು. ಸಂಗಾತಿಯಿಂದ ಸಣ್ಣ ಮಟ್ಟದ ನಷ್ಟವಾಗುವ ಸಾಧ್ಯತೆ ಇದೆ, ಕೆಲಸ ಬಿಡುವ ನಿರ್ಧಾರ ಮಾಡಬೇಡಿ.
ಧನು: ವ್ಯವಹಾರದಲ್ಲಿ ಲಾಭ ಗಳಿಸಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಕುಟುಂಬದಲ್ಲಿ ಸವಾಲುಗಳು ಎದುರಾಗಬಹುದು. ಆರೋಗ್ಯದ ಕಡೆ ಗಮನವಿರಲಿ.
ಮಕರ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮಕ್ಕಳ ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಹಸಿರು ಬಣ್ಣ ಅದೃಷ್ಟ ತರಲಿದೆ.
ಕುಂಭ: ಕಲೆ ಮತ್ತು ನಟನಾ ಕ್ಷೇತ್ರದಲ್ಲಿರುವವರಿಗೆ ಖ್ಯಾತಿ ಮತ್ತು ಸಂಪತ್ತು ಸಿಗಲಿದೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ.
ಮೀನ: ನಿಮ್ಮ ಕಲ್ಪನಾಶಕ್ತಿ ಇಂದು ಚುರುಕಾಗಿರುತ್ತದೆ. ಜಮೀನು ಅಥವಾ ಆಸ್ತಿ ಸಂಬಂಧಿತ ಕೆಲಸಗಳು ಸುಗಮವಾಗಿ ನಡೆಯಲಿವೆ. ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು.


