Breaking News

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಕೇರಳದ ಉಚ್ಛಾಟಿತ ಕಾಂಗ್ರೆಸ್‌ ಶಾಸಕ ಅರೆಸ್ಟ್

Kerala's expelled Congress MLA arrested for Physical abuse woman on the pretext of marriage

ತಿರುವನಂತಪುರ: ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಕೇರಳ ರಾಜ್ಯದ ಪಾಲಕ್ಕಾಡ್‌ನ ಉಚ್ಛಾಟಿತ ಕಾಂಗ್ರೆಸ್‌ ಶಾಸಕ ರಾಹುಲ್ ಮಮ್‌ಕೂಟತ್ತಿಲ್ ಅವರು ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಭಾನುವಾರ ಅರೆಸ್ಟ್‌ ಆಗಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಗರ್ಭಾವತಿಯನ್ನಾಗಿ ಮಾಡಿ ಬಳಿಕ ಗರ್ಭಪಾತಕ್ಕೆ ಒತ್ತಾಯಿಸಿರುವ ಆರೋಪದ ಮೇಲೆ ರಾಹುಲ್ ಮಮ್‌ಕೂಟತ್ತಿಲ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹೊಟೇಲ್‌ನಿಂದ ಬಂಧಿಸಿದ್ದು, ಮಾವೆಲಿಕ್ಕರ ಉಪ ಜೈಲಿಗೆ ಸ್ಥಳಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೂರನೇ ಪ್ರಕರಣದ ಹಿನ್ನೆಲೆ

ಕೆನಡಾದಲ್ಲಿ ವಾಸಿಸುತ್ತಿರುವ ಪತ್ತನಂತಿಟ್ಟ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಶಾಸಕರ ವಿರುದ್ಧ ಮೂರನೇ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ ಪ್ರಕಾರ, ಈ ಘಟನೆ 2024ರ ಏ.4 ರಂದು ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ನಡೆದಿದೆ.

ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ವೈರಲ್‌: ಮೂವರು ಅರೆಸ್ಟ್

ದೂರಿನ ಪ್ರಕಾರ, ಮಹಿಳೆ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಮಮ್‌ಕೂಟತಿಲ್‌ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಖಾಸಗಿಯಾಗಿ ಮಾತನಾಡಲು ಹೊಟೇಲ್‌ ರೂಮ್‌ ಬುಕ್‌ ಮಾಡುವಂತೆ ಹೇಳಿದ್ದಾಗಿ ಆರೋಪಿಸಲಾಗಿದೆ.

ಹೊಟೇಲ್‌ ರೂಮ್‌ನಲ್ಲಿ ಆಕೆಯ ಮೇಲೆ ಶಾಸಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಥಳಿಸಿ ಅತ್ಯಾಚಾರ ಎಸಗಿದ್ದಾರೆ.  ಇದರಿಂದಾಗಿ ತಾನು ಗರ್ಭಾವತಿಯಾಗಿದ್ದಾಗಿ ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ. ಗರ್ಭಾವತಿಯಾದ ಬಗ್ಗೆ ಶಾಸಕರಲ್ಲಿ ತಿಳಿಸಿದಾಗ ತನ್ನ ಮೇಲೆ ಅನುಮಾನಿಸಿ ಗರ್ಭದಲ್ಲಿರುವ ಮಗು ತನ್ನದಲ್ಲ ಎಂದು ವರಸೆ ಬದಲಾಯಿಸಿದ್ದಾರೆ. ಗರ್ಭಪಾತಕ್ಕೆ ಒತ್ತಾಯಿಸಿದ್ದಲ್ಲದೆ, ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ತಾನು ಆಘಾತಕ್ಕೊಳಗಾಗಿದ್ದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮಾಮ್‌ಕೂಟತಿಲ್‌ ವಿರುದ್ಧ ಈಗಾಗಲೇ ಎರಡು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದ್ದು, ಇದರ ತನಿಖೆಯನ್ನು ಈಗಾಗಲೇ ಎಸ್‌ಐಟಿ ನಡೆಸುತ್ತಿದ್ದು, ಇದೀಗ ಮೂರನೇ ಪ್ರಕರಣವನ್ನೂ ಎಸ್‌ಐಟಿಗೆ ಒಪ್ಪಿಸಲಾಗಿದೆ.

ಹಲವಾರು ಕ್ರಿಮಿನಲ್ ಪ್ರಕರಣಗಳು ಮತ್ತು ಆಂತರಿಕ ದೂರುಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಮಮ್‌ಕೂಟತಿಲ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಕೆಲವು ದಿನಗಳ ನಂತರ ಈ ಬಂಧನವಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು