IPL: ಮಿಚೆಲ್ ಸ್ಟಾರ್ಕ್ ಮಿಂಚು, ಪೊರೆಲ್-ರಾಹುಲ್ ಸಿಡಿಲಾಟ; ರಾಜಸ್ಥಾನ ವಿರುದ್ಧ ಡೆಲ್ಲಿಗೆ ರೋಚಕ ಜಯ

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 62ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ತಂಡದ ಪರ ಧ್ರುವ್ ಜುರೆಲ್ 53 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡಿದರೆ, ನಾಯಕ ರಿಯಾನ್ ಪರಾಗ್ 51 ರನ್ ಸಿಡಿಸಿ ಮಿಂಚಿದರು. ವೈಭವ್ ಸೂರ್ಯವಂಶಿ 46 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.

ಉಳಿದಂತೆ ಯಶಸ್ವಿ ಜೈಸ್ವಾಲ್ 12, ರವಿ ಸಿಂಗ್ 4, ಶುಭಂ ದುಬೆ 5, ದಸುನ್ ಶನಕ 10, ಜೋಫ್ರಾ ಆರ್ಚರ್ ಅಜೇಯ 2 ಹಾಗೂ ಆಡಂ ಮಿಲ್ನೆ ಅಜೇಯ 2 ರನ್ ಗಳಿಸಿದರು. ಡೊನೊವನ್ ಫೆರೇರಾ ಶೂನ್ಯಕ್ಕೆ ಔಟಾದರು.

ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ಪ್ರದರ್ಶಿಸಿ 4 ವಿಕೆಟ್ ಕಬಳಿಸಿದರು. ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಇದನ್ನೂ ಓದಿ: IPL: ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿದ ಬೆಂಗಳೂರು ಬಾಯ್ಸ್

194 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ತಂಡದ ಗೆಲುವಿನಲ್ಲಿ ಅಭಿಷೇಕ್ ಪೊರೆಲ್ 51 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರೆ, ಕೆಎಲ್ ರಾಹುಲ್ 56 ರನ್ ಬಾರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು.

ಅಕ್ಷರ್ ಪಟೇಲ್ ಅಜೇಯ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಶುತೋಷ್ ಶರ್ಮಾ ಅಜೇಯ 18 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಇನ್ನಿತರಾಗಿ ಸಾಹಿಲ್ ಪರಾಖ್ 9, ಟ್ರಿಸ್ಟನ್ ಸ್ಟಬ್ಸ್ 4 ಹಾಗೂ ಡೇವಿಡ್ ಮಿಲ್ಲರ್ 9 ರನ್ ಗಳಿಸಿದರು.

ರಾಜಸ್ಥಾನ ಪರ ಬ್ರಿಜೇಶ್ ಶರ್ಮಾ ಮತ್ತು ಜೋಫ್ರಾ ಆರ್ಚರ್ ತಲಾ 2 ವಿಕೆಟ್ ಪಡೆದರೆ, ದಸುನ್ ಶನಕ 1 ವಿಕೆಟ್ ಕಬಳಿಸಿದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು