IPL: ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್; ಚೆನ್ನೈ ವಿರುದ್ಧ ಎಸ್‌ಆರ್‌ಎಚ್‌ಗೆ ಭರ್ಜರಿ ಜಯ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 63ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು. ತಂಡದ ಪರ ಡೆವಾಲ್ಡ್ ಬ್ರೆವಿಸ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ 44 ರನ್ ಗಳಿಸಿದರು.

ಕಾರ್ತಿಕ್ ಶರ್ಮಾ 32 ರನ್ ಸೇರಿಸಿದರೆ, ಸಂಜು ಸ್ಯಾಮ್ಸನ್ 27 ಹಾಗೂ ಶಿವಂ ದುಬೆ 26 ರನ್ ಗಳಿಸಿ ತಂಡಕ್ಕೆ ನೆರವಾದರು. ಉಳಿದಂತೆ ರುತುರಾಜ್ ಗಾಯಕ್ವಾಡ್ 15, ಉರ್ವಿಲ್ ಪಟೇಲ್ 13, ಪ್ರಶಾಂತ್ ವೀರ್ 11 ಮತ್ತು ಅಕೇಲ್ ಹೊಸೈನ್ ಅಜೇಯ 3 ರನ್ ಗಳಿಸಿದರು.

ಹೈದರಾಬಾದ್ ಪರ ಪ್ಯಾಟ್ ಕಮ್ಮಿನ್ಸ್ ಮಿಂಚಿನ ಬೌಲಿಂಗ್ ಪ್ರದರ್ಶಿಸಿ 3 ವಿಕೆಟ್ ಕಬಳಿಸಿದರು. ಸಕೀಬ್ ಹುಸೇನ್ 2 ವಿಕೆಟ್ ಪಡೆದರೆ, ಎಶಾನ್ ಮಲಿಂಗ ಹಾಗೂ ಪ್ರಫುಲ್ ಹಿಂಜ್ ತಲಾ ಒಂದು ವಿಕೆಟ್ ಪಡೆದು ಚೆನ್ನೈ ಬ್ಯಾಟರ್‌ಗಳನ್ನು ನಿಯಂತ್ರಿಸಿದರು.

ಇದನ್ನೂ ಓದಿ: IPL: ಮಿಚೆಲ್ ಸ್ಟಾರ್ಕ್ ಮಿಂಚು, ಪೊರೆಲ್-ರಾಹುಲ್ ಸಿಡಿಲಾಟ; ರಾಜಸ್ಥಾನ ವಿರುದ್ಧ ಡೆಲ್ಲಿಗೆ ರೋಚಕ ಜಯ

181 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಗೆಲುವಿನ ನಗೆ ಬೀರಿತು. ತಂಡದ ಗೆಲುವಿನಲ್ಲಿ ಇಶಾನ್ ಕಿಶನ್ ಪ್ರಮುಖ ಪಾತ್ರವಹಿಸಿ ಸ್ಫೋಟಕ ಬ್ಯಾಟಿಂಗ್ ಮೂಲಕ 70 ರನ್ ಸಿಡಿಸಿದರು. ಹೆನ್ರಿಕ್ ಕ್ಲಾಸೆನ್ 47 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು.

ಇನ್ನೂ ಅಭಿಷೇಕ್ ಶರ್ಮಾ 26, ನಿತೀಶ್ ಕುಮಾರ್ ರೆಡ್ಡಿ 11, ಸಲೀಲ್ ಅರೋರಾ ಅಜೇಯ 10 ಹಾಗೂ ಸ್ಮರಣ್ ರವಿಚಂದ್ರನ್ ಅಜೇಯ 5 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟ್ರಾವಿಸ್ ಹೆಡ್ 6 ರನ್ ಗಳಿಸಿ ಔಟಾದರು.

ಚೆನ್ನೈ ಪರ ಮುಖೇಶ್ ಚೌಧರಿ 2 ವಿಕೆಟ್ ಪಡೆದರೆ, ಅಕೇಲ್ ಹೊಸೈನ್, ಅನ್ಶುಲ್ ಕಾಂಬೀಜ್ ಮತ್ತು ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದುಕೊಂಡರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು