ಆಶಾ ಕಾರ್ಯಕರ್ತೆಯ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ! ಮಗುವಿನ ದೇಹ ಒಂದು ಕಡೆ, ತಲೆ ತಾಯಿಯ ಗರ್ಭದೊಳಗೆ!

ಬಸ್ತಿ (ಉತ್ತರ ಪ್ರದೇಶ): ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಹೆರಿಗೆ ಮಾಡಿಸುವ ಭರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಎಸಗಿದ ಘೋರ ತಪ್ಪಿನಿಂದಾಗಿ ಏಳು ತಿಂಗಳ ಹಸುಗೂಸು ಪ್ರಾಣ ಕಳೆದುಕೊಂಡಿದ್ದು, ಮಗುವಿನ ತಲೆ ತಾಯಿಯ ಗರ್ಭದೊಳಗೆ ಸಿಲುಕಿಕೊಂಡ ಭೀಕರ ಘಟನೆ ವರದಿಯಾಗಿದೆ.

ಏಳು ತಿಂಗಳ ಗರ್ಭಿಣಿ ಪ್ರೇಮಾ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ದಾರಿಯಲ್ಲೇ ನೋವು ತೀವ್ರಗೊಂಡಾಗ, ಆಂಬ್ಯುಲೆನ್ಸ್‌ನಲ್ಲಿದ್ದ ಆಶಾ ಕಾರ್ಯಕರ್ತೆ ತಾನೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ವೈದ್ಯರಿಗಾಗಿ ಕಾಯದೆ ಬಲವಂತವಾಗಿ ಹೆರಿಗೆ ಮಾಡಿಸಲು ಮಗುವನ್ನು ಎಳೆದ ಪರಿಣಾಮ, ಮಗುವಿನ ದೇಹ ಕೈಗೆ ಬಂದಿದೆ. ಆದರೆ, ಮಗುವಿನ ತಲೆ ದೇಹದಿಂದ ಬೇರ್ಪಟ್ಟು ತಾಯಿಯ ಗರ್ಭದ ಒಳಗೇ ಉಳಿದುಕೊಂಡಿದೆ.

ಇದನ್ನೂ ಓದಿ: ರ್ಯಾಲಿಯಲ್ಲಿ ಕ್ಷಣಿಕ ಆತಂಕ: ವಿಜಯ್ ರೋಡ್‌ಶೋನಲ್ಲಿ ಅಚ್ಚರಿ ಘಟನೆ 

ತಪ್ಪು ಮಾಡಿದ ಸಿಬ್ಬಂದಿ ಸತ್ಯವನ್ನು ಮರೆಮಾಚಿ ಮಹಿಳೆಯನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದಾರೆ. ಅಲ್ಲಿ ಅಲ್ಟ್ರಾಸೌಂಡ್ ಮಾಡಿದಾಗ ಗರ್ಭದೊಳಗೆ ಮಗುವಿನ ಕತ್ತರಿಸಿದ ತಲೆ ಇರುವುದು ಕಂಡುಬಂದಿದೆ. ಕೂಡಲೇ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ತಲೆಯನ್ನು ಹೊರತೆಗೆದಿದ್ದಾರೆ. ಪ್ರಸ್ತುತ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು