Breaking News

ಕೊಡಗು: ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡು ತಾಗಿ ವ್ಯಕ್ತಿ ಗಂಭೀರ

ಮಡಿಕೇರಿ: ವ್ಯಕ್ತಿಯೋರ್ವರು ತಮ್ಮ ಮನೆ ಹಿಂಬದಿ ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ತೂರಿ ಬಂದ ಗುಂಡು ತಗುಲಿ ಗಂಭೀರ ಗಾಯಗೊಂಡ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪ ನಡೆದಿದೆ‌.

ಪುಲಿಯೇರಿ ಗ್ರಾಮದ ಆನಂದಪುರ ನಿವಾಸಿ ಆನೆಸ್‌ಡಿಕುಂಞ ಎಂಬುವರೇ ಗುಂಡು ತಗುಲಿದ ವ್ಯಕ್ತಿ. ಬಚ್ಚಲು ಕೊಠಡಿಗೆ ಸೌದೆಗಳನ್ನು ತೆಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ದಿಢೀರನೆ ತೂರಿ ಬಂದು ಗುಂಡು ಎದೆ ಭಾಗಕ್ಕೆ ಹಾಗೂ ಕಾಲಿಗೆ ತಗುಲಿ ಗಂಭೀರ ಗಾಯವಾಗಿದೆ.

Advertisement

ಇದನ್ನೂ ಓದಿ: ಅಂದು ನಾನು ಮಧ್ಯಪ್ರವೇಶಿಸದಿದ್ದರೆ ಆಪರೇಷನ್​​ ಸಿಂಧೂರ್​​ದಲ್ಲಿ ಪಾಕ್​​ ಪ್ರಧಾನಿ ಷರೀಫ್ ಜೀವಂತ ಇರುತ್ತಿರಲಿಲ್ಲ: ಡೊನಾಲ್ಡ್ ಟ್ರಂಪ್

ಗಾಯಗೊಂಡಿದ್ದ ವ್ಯಕ್ತಿಯನ್ನು ಅವರ ಪುತ್ರಿ ತಕ್ಷಣವೇ ಸ್ಥಳೀಯರ ನೆರವಿನಿಂದ ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ದಾಖಲಿಸಿದರು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಗುಂಡು ಯಾವ ದಿಕ್ಕಿನಿಂದ ಬಂದದ್ದು, ಯಾರು ಹಾರಿಸಿದ್ದು ಎಂದು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು