Breaking News

ಸರಿಯಾಗಿ ಬಟ್ಟೆ ಹಾಕು ಎಂದ ಮಹಿಳಾ ಹೋಮ್‌ಗಾರ್ಡ್‌ಗೆ ಥಳಿಸಿದ ಯುವತಿ!

A young woman beat up a female home guard in Bengaluru video goes viral

ಬೆಂಗಳೂರು: ಹಿರಿಯರ ಅಥವಾ ತಿಳಿದವರ ಬುದ್ಧಿ ಮಾತು ಇಂದಿನ ಕೆಲವು ಯುವ ಪೀಳಿಗೆಗೆ ಸಿಟ್ಟು ತರಿಸುವ ವಿಷಯವಾಗಿದೆ. ಏಕೆಂದರೆ, ಇಲ್ಲೊಬ್ಬಾಕೆ, ಸರಿಯಾಗಿ ಬಟ್ಟೆ ಹಾಕು ಎಂದು ಹೇಳಿದ ಮಹಿಳಾ ಹೋಮ್‌ಗಾರ್ಡ್‌ ಮೇಲೇಯೇ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕೆ.ಆರ್‌.ಪುರಂನಲ್ಲಿ ನಡೆದಿದೆ.

ಕೆ.ಆರ್. ಪುರಂ ರೈಲು ನಿಲ್ದಾಣದ ಬಳಿ ಯುವತಿಯೊಬ್ಬಳು ರಸ್ತೆ ಮಧ್ಯದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಗೃಹರಕ್ಷಕ ದಳದ ಮೇಲೆ ಹಲ್ಲೆ ನಡೆಸಿದ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಮಹಿಳಾ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ಥಳಿತಕ್ಕೊಳಗಾದವರು ಹಾಗೂ ಥಳಿಸಿದ ಯುವತಿ ಮೋಹಿನಿ ಎಂದು ತಿಳಿದುಬಂದಿದೆ.

Advertisement

ಮೂಲಗಳ ಪ್ರಕಾರ, ಮೋಹಿನಿ ಶಾರ್ಟ್ಸ್ ಧರಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಥಳದಲ್ಲಿದ್ದ ಕೆಲವು ಯುವಕರು ಆಕೆಯನ್ನು ಕೀಟಲೆ ಮಾಡಲು ಪ್ರಾರಂಭಿಸಿದ್ದಾರೆ. ಪರಿಸ್ಥಿತಿಯನ್ನು ಗಮನಿಸಿದ ಮತ್ತು ಯಾವುದೇ ಅಹಿತಕರ ಘಟನೆಯನ್ನು ತಡೆಯುವ ಪ್ರಯತ್ನದಲ್ಲಿ, ಲಕ್ಷ್ಮಿ ನರಸಮ್ಮ ಮಧ್ಯಪ್ರವೇಶಿಸಿ, ಸುರಕ್ಷತಾ ದೃಷ್ಟಿಯಿಂದ ಯುವತಿಯ ಉಡುಪಿನ ಬಗ್ಗೆ ಶಾಂತವಾಗಿ ಸಲಹೆ ನೀಡಿದ್ದಾರೆ.

ಆದಾಗ್ಯೂ, ಗೃಹರಕ್ಷಕದಳದ ಮಾತುಗಳನ್ನು ಕೇಳಿ, ಮೋಹಿನಿ ಕೋಪಗೊಂಡು ರಸ್ತೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದಲ್ಲದೆ ಲಕ್ಷ್ಮಿ ನರಸಮ್ಮ ಅವರನ್ನು ಹಿಡಿದು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹಠಾತ್ ದಾಳಿಯಿಂದ ಗೃಹರಕ್ಷಕದಳ ಆಘಾತಕ್ಕೀಡಾದರು. ಕೂಡಲೇ ಕೆಲವು ಸ್ಥಳೀಯರು ಹಲ್ಲೆಯನ್ನು ತಡೆಯಲು ಮುಂದಾಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಘಟನೆ ಸಂಬಂಧ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ರಾಮಮೂರ್ತಿ ನಗರ ಠಾಣಾ ಪೊಲೀಸರು, ಆರೋಪಿ ಮೋಹಿನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅದರಂತೆ, ನ್ಯಾಯಾಲಯವು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು