Breaking News

Sad: ಬೊಳುಬೈಲು ಅಪಘಾತದ ಗಾಯಾಳು ಮೃತ್ಯು

ಸುಳ್ಯ: ಕುಟುಂಬದವರೊಂದಿಗೆ ತೆರಳುತ್ತಿದ್ದ ಕಾರಿಗೆ ಪಾನಮತ್ತರಾಗಿ ಆಗಮಿಸಿದ ಯುವಕರು ಕಾರು ಫೆ.21 ರಂದು ಸಂಜೆ ಅಪಘಾತ ಪಡಿಸಿತ್ತು. ಗಂಭೀರ ಗಾಯಗೊಂಡಿದ್ದ ಚಾಲಕ ಕುಕ್ಕೆಶ್ರೀ ವಸಂತ್ ಸೋಮವಾರ ರಾತ್ರಿ ನಿಧನರಾದ ಘಟನೆ ನಡೆದಿದೆ.

ಕುಕ್ಕೆಶ್ರೀ ವಸಂತ್ ಅವರು ಕುಟುಂಬದೊಂದಿಗೆ ಮಡಂತ್ಯಾರಿಗೆ ಹೊರಟಿದ್ದ ವೇಳೆ ಬೊಳುಬೈಲಿನಲ್ಲಿ ಅವರ ಕಾರಿಗೆ ಹಿಂಬದಿಯಿಂದ ಅತೀ ವೇಗವಾಗಿ ಬಂದ ಕಾರಿಗೆ ಢಿಕ್ಕಿಯಾಯಿತು.

Advertisement

ಇದನ್ನೂ ಓದಿ: ಗದಗ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ಮೂವರು ಮಹಿಳೆಯರ ಮೇಲೆ ಹರಿದ ಕೆಕೆಆರ್‌ಟಿಸಿ ಬಸ್

ಪರಿಣಾಮ ವಸಂತ್ ಅವರಿಗೆ ಗಂಭೀರ ಗಾಯಗೊಂಡರೆ ಅವರ ಪತ್ನಿ, ಮಕ್ಕಳಿಗೂ ಗಾಯಗಳಾಗಿತ್ತು. ಕೂಡಲೇ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಅವರನ್ನು ಫೆ.23 ರಂದು ಬೆಳಗ್ಗಿನ ಜಾವ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತರಲಾಯಿತು. ಅಂದು ಸಂಜೆ ಕೊನೆಯುಸಿರು ಎಳೆದಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು