ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಕನ್ನಡದ ನಟ ಮಯೂರ್ ಪಟೇಲ್ ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಟನ ಅಜಾಗರೂಕ ಚಾಲನೆಯಿಂದಾಗಿ ಸರಣಿ ಅಪಘಾತಗಳು ಸಂಭವಿಸಿವೆ. ಮಯೂರ್ ತಮ್ಮ ಫಾರ್ಚೂನರ್ ಕಾರನ್ನು ಕುಡಿದ ಮತ್ತಿನಲ್ಲಿ ಅತಿ ವೇಗದಲ್ಲಿ ಚಲಾಯಿಸುತ್ತಿರುವುದು ಕಂಡುಬಂದಿದೆ. ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ: Shocking: ಅನಂತ್ ಸುಬ್ಬರಾವ್ ನಿಧನ, ಬೆಂಗಳೂರು ಚಲೋ ಮುಂದೂಡಿಕೆ
ದೊಮ್ಮಲೂರಿನ ಕಮಾಂಡೋ ಆಸ್ಪತ್ರೆ ಬಳಿ ನಡೆದ ಸರಣಿ ಅಪಘಾತಗಳಲ್ಲಿ ನಟ ಮಯೂರ್ ಭಾಗಿಯಾಗಿದ್ದರು. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ್ದ ಮಯೂರ್ ಪಟೇಲ್, ಸರ್ಕಾರಿ ವಾಹನ ಸೇರಿದಂತೆ ಹಲವಾರು ಕಾರುಗಳಿಗೆ ಹಾನಿ ಮಾಡಿದ್ದಾರೆ. ಕನ್ನಡ ನಟನಿಂದ ಕಾರುಗಳಿಗೆ ಹಾನಿಗೊಳಗಾದ ಶ್ರೀನಿವಾಸ್ ಮತ್ತು ಅಭಿಷೇಕ್, ತಕ್ಷಣವೇ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೊಯ್ಸಳ ಪೊಲೀಸರು ವಶಕ್ಕೆ ಪಡೆದರು ವೈದ್ಯಕೀಯ ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಕಂಡುಬಂದಿದೆ. ದೂರಿನ ನಂತರ, ಮಯೂರ್ ಪಟೇಲ್ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಯೂರ್ ಅವರ ಕಾರಿಗೆ ವಿಮೆ ಕೂಡ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

