ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ರೀಲ್ಸ್ ರಾಣಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಇತ್ತೀಚೆಗಷ್ಟೇ ನವಿಲುಗರಿ ಇರುವ ಉಡುಪು ಧರಿಸಿ ವಿಡಿಯೋ ಮಾಡಿ ತೀವ್ರ ಕಾನೂನು ಸಂಕಷ್ಟಕ್ಕೆ ಸಿಲುಕುವ ಹಾದಿಯಲ್ಲಿದ್ದರು. ಅರಣ್ಯ ಇಲಾಖೆ ಕಣ್ಣು ಕೆಂಪು ಮಾಡುತ್ತಿದ್ದಂತೆ ತಕ್ಷಣವೇ ಎಚ್ಚೆತ್ತುಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಿ ಪ್ರಕರಣವನ್ನು ತಣ್ಣಗಾಗಿಸಿದ್ದರು. ಈಗ ಈ ಎಲ್ಲಾ ವಿವಾದಗಳನ್ನು ಬದಿಗಿಟ್ಟಿರುವ ನಿವೇದಿತಾ ಗೌಡ, ಮತ್ತೆ ತಮ್ಮ ಎಂದಿನ ‘ರೀಲ್ಸ್ ಮೋಡ್’ಗೆ ಕಮ್‌ಬ್ಯಾಕ್ ಮಾಡಿದ್ದಾರೆ.
ವೀಕೆಂಡ್ ಮೂಡ್‌ನಲ್ಲಿರುವ ನಿವೇದಿತಾ ಗೌಡ ಅವರು ಬೆಂಗಳೂರಿನ ಹೊರವಲಯಕ್ಕೆ ಪುಟ್ಟದೊಂದು ಟ್ರಿಪ್‌ಗೆ ಹೋಗಿದ್ದಾರೆ. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಹಸುವನ್ನು ಕಂಡು ಅವರು ಫುಲ್ ಖುಷಿಯಾಗಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಅವರು, ರಸ್ತೆಯಲ್ಲೇ ನಿಂತು ಆ ಹಸುವಿನ ಕೆಚ್ಚಲಿಗೆ ಕೈ ಹಾಕಿ ಸಾಂಪ್ರದಾಯಿಕ ಶೈಲಿಯಲ್ಲಿ ಹಾಲು ಕರೆದು ಸಂಭ್ರಮಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ
View this post on Instagram
ಗಾಯನ ಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಸೂಪರ್ ಹಿಟ್ ಸಿನಿಮಾ ಗೀತೆಯಾದ ‘ಹಳ್ಳಿ ಹಾಡು..’ ಹಾಡನ್ನು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಗಿ ಬಳಸಿ ನಿವೇದಿತಾ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದಾ ವೆಸ್ಟರ್ನ್ ಹಾಗೂ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಅವರ ಈ ಹಳ್ಳಿ ಸೊಗಡಿನ ಸರಳತೆಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ:ಸ್ಯಾಂಡಲ್‌ವುಡ್‌ನಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಒಡೆಯನಾದ ಕಿಚ್ಚ ಸುದೀಪ್
ವಿಡಿಯೋ ಅಪ್ಲೋಡ್ ಆದ ಕೇವಲ ಎರಡೇ ಗಂಟೆಗಳಲ್ಲಿ ಬರೋಬ್ಬರಿ 4.5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು (Views) ಪಡೆದುಕೊಂಡು ಇಂಟರ್ನೆಟ್‌ನಲ್ಲಿ ಭಾರಿ ಧೂಳೆಬ್ಬಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸದಾ ನೆಗೆಟಿವ್ ಕಮೆಂಟ್ಸ್ ಹಾಗೂ ಟ್ರೋಲ್‌ಗಳನ್ನೇ ಎದುರಿಸುತ್ತಿದ್ದ ನಿವೇದಿತಾ ಗೌಡ ಅವರ ಈ ಹೊಸ ರೀಲ್ಸ್‌ಗೆ ಹೆಚ್ಚಿನ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಸರಳ ಮತ್ತು ಮುಗ್ಧ ಸ್ವಭಾವವನ್ನು ಕೊಂಡಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

