ಕಾಫಿ ಕೇವಲ ನಿದ್ರೆ ಓಡಿಸುವ ಪಾನೀಯವಲ್ಲ, ಅದು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಸಂಜೀವಿನಿಯೂ ಹೌದು. ಆದರೆ, ಅನೇಕರು ಕಾಫಿ ಕುಡಿಯುವಾಗ ಮಾಡುವ ಸಣ್ಣ ತಪ್ಪುಗಳು ಲಿವರ್ ಮತ್ತು ಜೀರ್ಣಾಂಗವ್ಯೂಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಎಚ್ಚರಿಸಿದ್ದಾರೆ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಆಸಿಡ್ ರಿಫ್ಲಕ್ಸ್ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬಿನಂಶವಿರುವ ಆಹಾರದೊಂದಿಗೆ ಸೇವಿಸುವುದು ಉತ್ತಮ.ಕಾಫಿಗೆ ಸಕ್ಕರೆ ಅಥವಾ ಫ್ಲೇವರ್ಡ್ ಸಿರಪ್ಗಳನ್ನು ಸೇರಿಸುವುದರಿಂದ ಅದು ಲಿವರ್ನಲ್ಲಿ ಕೊಬ್ಬು ಶೇಖರಣೆಯಾಗಲು (Fatty Liver) ಪ್ರೇರೇಪಿಸುತ್ತದೆ. ಕೇವಲ ಸ್ವಲ್ಪ ಹಾಲು ಅಥವಾ ಬ್ಲಾಕ್ ಕಾಫಿ ಕುಡಿಯುವುದು ಹೆಚ್ಚು ಸೂಕ್ತ.

ಪೇಪರ್ ಫಿಲ್ಟರ್ ಬಳಸಿ ಸಿದ್ಧಪಡಿಸಿದ ಕಾಫಿ ಆರೋಗ್ಯಕ್ಕೆ ಉತ್ತಮ. ಇದು ಕೊಲೆಸ್ಟ್ರಾಲ್ ಹೆಚ್ಚಿಸುವ ಅಂಶಗಳನ್ನು (Cafestol) ತೆಗೆದುಹಾಕುತ್ತದೆ. ಅನ್ಫಿಲ್ಟರ್ಡ್ ಕಾಫಿ (ಉದಾ: ಫ್ರೆಂಚ್ ಪ್ರೆಸ್) ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದು.ದಿನಕ್ಕೆ 4 ಕಪ್ಗಿಂತ ಹೆಚ್ಚು ಕಾಫಿ ಕುಡಿಯುವುದರಿಂದ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಹೆಚ್ಚಾಗಬಹುದು ಮತ್ತು ಆತಂಕಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: “ನನ್ನ ಅಪ್ಪನ ಸಕ್ಕರೆ ಚಟ ಬಿಡಿಸಿ”: ಪತ್ರ ಬರೆದ ಯುವಕನಿಗೆ ಪ್ರಧಾನಿ ಮೋದಿ ಕೊಟ್ಟ ಉತ್ತರಕ್ಕೆ ಜನರು ಫಿದಾ
ಕಾಫಿಯಲ್ಲಿನ ಕೆಫೀನ್ ನಿದ್ರೆಯ ಗುಣಮಟ್ಟವನ್ನು ಕೆಡಿಸುತ್ತದೆ. ಆದ್ದರಿಂದ ರಾತ್ರಿ ಮಲಗುವ ಕನಿಷ್ಠ 6 ರಿಂದ 8 ಗಂಟೆಗಳ ಮೊದಲು ಕಾಫಿ ಸೇವನೆ ನಿಲ್ಲಿಸಬೇಕು. ನಿಮ್ಮ ಕಾಫಿಗೆ ಒಂದು ಚಿಟಿಕೆ ದಾಲ್ಚಿನ್ನಿ (Cinnamon) ಅಥವಾ ಸ್ವಲ್ಪ ಕೋಕೋ ಪೌಡರ್ ಸೇರಿಸುವುದರಿಂದ ಅದು ದೇಹದ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯನ್ನು ಪಡೆಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

