Breaking News

ಇನ್ನು ಮುಂದೆ ಓಡಿ ಹೋಗಿ ಮದುವೆಯಾಗಿ ರಿಜಿಸ್ಟ್ರೇಷನ್‌ ಮಾಡಬೇಕೆಂದರೆ ಪೋಷಕರ ಅನುಮತಿ ಕಡ್ಡಾಯ!

Amendment to Gujarat Registration of Marriage Act 2006 Parental consent mandatory before registration

ಗುಜರಾತ್ ಸರ್ಕಾರವು ಗುಜರಾತ್‌ ರಿಜಿಸ್ಟ್ರೇಷನ್‌ ಆಫ್‌ ಮ್ಯಾರೇಜ್‌ ಆಕ್ಟ್‌ 2006 ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ತಿದ್ದುಪಡಿಯ ಪ್ರಕಾರ, ಮದುವೆ ನೋಂದಣಿಗೆ ವಧು–ವರರು ತಮ್ಮ ಪೋಷಕರಿಗೆ ಮಾಹಿತಿ ನೀಡಿರುವುದಾಗಿ ಘೋಷಣೆ ಸಲ್ಲಿಸಬೇಕು. ಜೊತೆಗೆ, ಪೋಷಕರ ಗುರುತಿನ ದಾಖಲೆ, ದೂರವಾಣಿ ಸಂಖ್ಯೆ ಮತ್ತು ವಿಳಾಸದ ವಿವರಗಳನ್ನು ಒದಗಿಸಬೇಕಾಗುತ್ತದೆ.

ಉಪ ಮುಖ್ಯಮಂತ್ರಿ ಹರ್ಷ ಸಂಘ್ವಿ ಅವರು, “ಲವ್ ಜಿಹಾದ್ ಎಂಬ ಹೆಸರಿನಲ್ಲಿ ದುರುಪಯೋಗ ನಡೆಯುತ್ತಿದೆ. ಯುವತಿಯರ ರಕ್ಷಣೆಗಾಗಿ ಬಲವಾದ ಕ್ರಮ ಅಗತ್ಯ” ಎಂದು ಹೇಳಿದ್ದಾರೆ. ಆದರೆ ಕಾನೂನು ತಜ್ಞರು ಈ ತಿದ್ದುಪಡಿ ಸಂವಿಧಾನದ ಮೂಲ ಹಕ್ಕುಗಳಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟಿದ್ದಾರೆ. ಘನಶ್ಯಾಮ ಶಾ ಅವರು, “ವಯಸ್ಕರಿಗೆ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವ ಪೂರ್ಣ ಹಕ್ಕು ಇದೆ. ಇದು ಸಮಾಜವನ್ನು ಪುನಃ ಜಮೀನ್ದಾರಿ ಮನೋಭಾವದತ್ತ ಕೊಂಡೊಯ್ಯಬಹುದು” ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: ಮಂಗಳೂರು: ಅನ್ಯಕೋಮಿನ ಯುವಕ ಮೊಹಮ್ಮದ್ ಮಿದ್ಲಾಜ್ ಜತೆಗೆ ಹಿಂದೂ ಯುವತಿ ಪರಾರಿ

ಈ ತಿದ್ದುಪಡಿಯ ವಿರುದ್ಧ ದೊಡ್ಡ ರಾಜಕೀಯ ವಿರೋಧ ವ್ಯಕ್ತವಾಗಿಲ್ಲ. ಇಸುದನ್‌ ಗಧ್ವಿ ಅವರು ಈ ತಿದ್ದುಪಡಿಯನ್ನು ಸ್ವಾಗತಿಸಿದ್ದು, ಇದು ಸಮಾಜದ ಹಿತ ಕಾಪಾಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ಅಚ್ಚರಿಯೆಂಬಂತೆ, ಕಾಂಗ್ರೆಸ್ ಸಂಸದ ಗೆನಿಬೆನ್‌ ಠಾಕೋರ್‌ ಕೂಡ ಸ್ವಾಗತಿಸಿದ್ದು, “ಇದು ಯಾವುದೇ ಸಮುದಾಯದ ವಿರುದ್ಧವಲ್ಲ, ಇಂದಿನ ಪರಿಸ್ಥಿತಿಯಲ್ಲಿ ಅಗತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು