Breaking News

Andhra Pradesh : ದೇವಾಲಯದ ಗೋಡೆ ಹತ್ತಿ ಮದ್ಯದ ಬಾಟಲಿ ಕೇಳಿದ ಭೂಪ : ತಿರುಪತಿಯಲ್ಲಿ‌ ಹೀಗೊಂದು ಘಟನೆ

ಆಂಧ್ರಪ್ರದೇಶ : ಮದ್ಯದ ಅಮಲಿನಲ್ಲಿ ಜನರಿಗೆ ಕೆಲವೊಮ್ಮೆ ಎಲ್ಲಿದ್ದೇವೆ ಅನ್ನೋದೇ ನೆನಪಿರಲ್ಲ. ಕುಡಿದಿರೋ ನಶೆ ಇಳಿಯುವ ತನಕ‌ ಏನೇನನ್ನೋ ಬಡಬಡಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ, ಆಂಧ್ರಪ್ರದೇಶದ ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಒಬ್ಬ ವ್ಯಕ್ತಿ ಮದ್ಯಪಾನ ಮಾಡಿ ಗದ್ದಲ ಸೃಷ್ಟಿಸಿದ್ದಾನೆ. ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಂಡು, ದೇವಾಲಯದ ಗೋಡೆ ಹತ್ತಿ ಮದ್ಯದ ಬಾಟಲಿ ಕೇಳಿದ್ದಾನೆ ಎಂಬುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗೋಪುರವನ್ನು ಏರಿ ಕಳಸವನ್ನು ಕದಿಯಲು ಯತ್ನಿಸಿದ್ದ ;

Advertisement

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕುರ್ಮಾವಾಡದಲ್ಲಿ, 45 ವರ್ಷದ ಕುಟ್ಟಾಡಿ ತಿರುಪತಿ ಎಂಬ ವ್ಯಕ್ತಿ ದೇವಾಲಯದ ಭದ್ರತೆಯನ್ನು ತಪ್ಪಿಸಿಕೊಂಡು ಗೋಡೆ ಹತ್ತಿ, ಗೋಪುರವನ್ನು ಏರಿ ಕಳಸವನ್ನು ಕದಿಯಲು ಯತ್ನಿಸಿದ್ದಾನೆ. ಈ ಸಂದರ್ಭ ವಿಚಕ್ಷಣಾ ಸಿಬ್ಬಂದಿ ಆತನನ್ನು ಗಮನಿಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಆದ ಬಳಿಕ ಆತ ಪರಾರಿಯಾಗಿದ್ದಾನೆ ಎಂದು ಸುದ್ದಿಯಾಗಿದೆ.

ಕೇಳೋದಿಕ್ಕೆ ಇದು ತಮಾಷೆ ಅನಿಸಿದ್ರೂ, ಈ ಘಟನೆ ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ. ತಿರುಪತಿಯಲ್ಲಿ, ಕೆಳಗೆ ಇಳಿಯುವಂತೆ ಕೇಳಿದಾಗ, ವ್ಯಕ್ತಿಯೊಬ್ಬರು ‘ಕ್ವಾರ್ಟರ್ ಬಾಟಲಿ( ಆಲ್ಕೋಹಾಲ್)’ ನೀಡಿದರೆ ಮಾತ್ರ ಕೆಳಗಿಳಿಯುವುದಾಗಿ ಹೇಳಿಕೊಂಡ ಘಟನೆ ವರದಿಯಾಗಿದೆ. ಅವರ ಬೇಡಿಕೆ ಈಡೇರಿಸಿದ ನಂತರ, ಅವರನ್ನು ಕೆಳಗಿಳಿಸಿ ತಿರುಪತಿ ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿರುಪತಿ ಪೂರ್ವ ಡಿಎಸ್ಪಿ ಎಂ ಭಕ್ತವತ್ಸಲಂ ನಾಯ್ಡು ತಿಳಿಸಿದ್ದಾರೆ. ಈ ಸಂದರ್ಭ ಭದ್ರತಾ ಸಿಬ್ಬಂದಿಗಳು ಅಥವಾ ಶಿಸ್ತು ಕಾಪಾಡುವ ದೇವಸ್ಥಾನದ ಆಡಳಿತ ಮಂಡಳಿಗೆ ಕಪ್ಪು ಚುಕ್ಕೆಯಂತೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು