ಬೆಳ್ತಂಗಡಿ: ಪೊಲೀಸ್ ಠಾಣಾ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಸಂಬೋಳ್ಯದ ಸುಮಂತ್ ಎಂಬ ಬಾಲಕನ ಸಾವು ನಿಗೂಢವಾಗಿಯೇ ಉಳಿದೆ. ಹೀಗಾಗಿ ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಗ್ರಾಮದ ಮೊಗೇರು ಆರ್ಎಸ್ಬಿ ಯುವ ಸಂಘವು ಬೆಳ್ತಂಗಡಿ ಪೊಲೀಸರಿಗೆ ಮನವಿ ಸಲ್ಲಿಸಿದೆ.
ಸಂಬೊಳ್ಯದ ಸುಬ್ರಹ್ಮಣ್ಯ ಹಾಗೂ ಲತಾ ದಂಪತಿಯ ಪುತ್ರ ಸುಮಂತ್, ಜ.14 ರಂದು ಬೆಳಗ್ಗೆ ಧನುಪೂಜೆಗೆಂದು ಮನೆಯಿಂದ ಹೊರಟು ಕಾಣೆಯಾಗಿ ನಂತರದ ಬೆಳವಣಿಗೆ ಪ್ರಕಾರ ಅವನ ಅಸಹಜ ಸಾವು ಸಮಸ್ತ ನಾಗರೀಕ ಸಮಾಜಕ್ಕೆ ಅತೀವ ಬೇಸರ ಉಂಟು ಮಾಡಿದೆ. ಪ್ರತಿಭಾನ್ವಿತ ಬಾಲಕ ಸುಮಂತ್ನ ಅಸಹಜ ಸಾವಿನ ತನಿಖೆಯನ್ನು ಉತ್ತಮ ರೀತಿಯಲ್ಲಿ ನಡೆಸಲಾಗುತ್ತಿದೆ. ಈ ಸಾವು ಪ್ರಕರಣದ ಮುಂದಿನ ತನಿಖೆಯು ನಿಷ್ಪಕ್ಷಪಾತವಾಗಿ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: Belthangady : ಸುಮಂತ್ ಸಾವು ಪ್ರಕರಣ: ಕುಟುಂಬಸ್ಥರ ನೆರವಿಗೆ ದಾವಿಸಿದ ಮೋಂತಿಮಾರು ಆರ್.ಎಸ್.ಬಿ. ಸಂಘ
ಮನವಿ ಪತ್ರ

ಸುಮಂತ್ ಸಾವು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಆ ಮೂಲಕ ಮೃತ ಸುಮಂತ್ ಹಾಗೂ ಆತನ ಪೋಷಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ನಾರಾಯಣ ನಾಯಕ್ ಕೇರಿ ಮೂಲೆ ಮುಂದಳುತ್ವದೊಂದಿಗೆ ಮೊಗೇರು ಆರ್ಎಸ್ಬಿ ಯುವ ಸಂಘದ 10 ಮಂದಿ ಸದಸ್ಯರು ಜ.22 ರಂದು ಸುಮಂತ್ ಮನೆಗೆ ಭೇಟಿ ನೀಡಿದ ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅವರನ್ನು ಭೇಟಿಯಾಗಿ ಮನವಿ ನೀಡಿದರು. ಇದೇ ವೇಳೆ ತನಿಖಾ ಪ್ರಗತಿಯ ಮಾಹಿತಿ ಕಲೆಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

