ಹಿಂದುತ್ವಕ್ಕೆ ನನ್ನ ಜೀವನ ಮುಡಿಪು: ಆರ್‌.ಅಶೋಕ್‌ ಹೇಳಿಕೆಗೆ ಅರುಣ್ ಕುಮಾರ್‌ ಪುತ್ತಿಲ ತಿರುಗೇಟು

Arun Kumar Puthila reacts to R Ashok's statement on Puttur election

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ‘ಹಿಂದೂ, ಹಿಂದೂ’ ಎಂದು ಹೇಳಿದ ಕಾರಣಕ್ಕೆ ಬಿಜೆಪಿಗೆ ಸೋಲಾಯಿತು ಎಂದು ಹೇಳುವ ಮೂಲಕ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ವಿಪಕ್ಷ ನಾಯಕ ಆರ್.‌ ಅಶೋಕ್‌ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ ಪುತ್ತಿಲ, ಹಿಂದುತ್ವಕ್ಕೆ ನನ್ನ ಜೀವನ ಮುಡಿಪು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ಅಶೋಕ್‌ ಅವರ ಹೇಳಿಕೆ ಮತ್ತು ಯಾರನ್ನು ಗುರಿಯಾಗಿಸಿಕೊಂಡು ಹೇಳಿದ್ದಾರೆಂದು ಅವರನ್ನೇ ಕೇಳಬೇಕಷ್ಟೆ. ಆದರೆ, ತಾನು ತನ್ನ ಜೀವನದ ಕೊನೆಯ ವರೆಗೆ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇನೆ.

Advertisement

ಧರ್ಮದ ವಿರುದ್ಧ ನಡೆಯುವ ಚಟುವಟಿಕೆಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳ ವಿರುದ್ಧದ ಷಡ್ಯಂತ್ರಗಳು, ಗೋಹತ್ಯೆ ಹಾಗೂ ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲಕ್ಕೆ ಸಿಲುಕಿಸುವ ಪ್ರಯತ್ನಗಳ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸಿದ್ದೇನೆ ಎಂದು ಹೇಳಿದರು.

‘ಯಾವುದೇ ಅಪೇಕ್ಷೆಗಾಗಿ ಹಿಂದುತ್ವದ ಕೆಲಸ ಮಾಡಿಲ್ಲ’

Advertisement

ತಮ್ಮ ಹೋರಾಟದ ನಿಲುವನ್ನು ಸ್ಪಷ್ಟಪಡಿಸಿದ ಅರುಣ್ ಕುಮಾರ್ ಪುತ್ತಿಲ, ಜೀವನದ ಕೊನೆಯ ದಿನದವರೆಗೂ ಹಿಂದುತ್ವಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದರು. ಯಾವುದೇ ವೈಯಕ್ತಿಕ ಅಪೇಕ್ಷೆ ಅಥವಾ ಬೇರೆ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹಳೆ ಚಪ್ಪಲಿ ಹಿಡಿದು ಶಾಸಕರ ಕಚೇರಿಗೆ ಹೋಗಿ ಪ್ರಶ್ನಿಸಿ: ಬೆಳ್ತಂಗಡಿ ಶಾಸಕರ ವಿರುದ್ಧ ಅಶೋಕ್ ರೈ ವಾಗ್ದಾಳಿ

Advertisement

ಪುತ್ತೂರು ವಿಧಾನಸಭಾ ಚುನಾವಣೆಯ ಸೋಲಿನ ಕುರಿತು ಆರ್. ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುವ ಮೂಲಕ ಪುತ್ತಿಲ ತಮ್ಮ ರಾಜಕೀಯ ನಿಲುವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.

ಜಿ.ಪಂ., ತಾ.ಪಂ. ಚುನಾವಣೆಗೆ ಸಿದ್ಧತೆ

ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಸಿದ್ಧತೆಯ ಬಗ್ಗೆಯೂ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ಕಾರ್ಯಕರ್ತರ ಅಭಿಪ್ರಾಯದಂತೆ ಸಭೆ ನಡೆಸಿ ಚುನಾವಣೆಯ ಕುರಿತು ಚರ್ಚಿಸಲಾಗಿದೆ. ಬೂತ್ ಮಟ್ಟದ ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗುವುದು. ಕಾರ್ಯಕರ್ತರ ಅಭಿಪ್ರಾಯಗಳಂತೆ ಮುಂದಿನ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು.

ಆರ್. ಅಶೋಕ್‌ ಹೇಳಿದ್ದೇನು?

ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಪುತ್ತೂರಿಗೆ ಭೇಟಿ ನೀಡಿದ್ದ ಆರ್‌ ಅಶೋಕ್‌, “ಅವರು ಕಳೆದ ಬಾರಿ ನಾನು ಎಂದು ಹೇಳಿ ನಂಬಿಸಿದ್ದರು. ಇದರಿಂದಾಗಿ ಹಾಗಾಯಿತು ಎಂದು ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಹೀನಾಯ ಸೋಲು ಅನುಭವಿಸಿದ ಬಗ್ಗೆ ಮಾತನಾಡಿದರು. ಅಲ್ಲದೆ, ಹಿಂದೆ ಆಗಿದ್ದಂತಹ ಸಮನ್ವಯದ ಕೊರತೆ ಮುಂದೆ ಆಗುವುದಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪುತ್ತೂರನ್ನು ಮತ್ತೆ ಗೆದ್ದೇ ಗೆಲ್ಲುತ್ತೇವೆ ಎಂದಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ