Breaking News

T20 Worldcup: ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಆಸ್ಟ್ರೇಲಿಯಾ

ಪಲ್ಲಕೆಲೆ: ಟಿ-20 ವಿಶ್ವಕಪ್‌ನ ಕೊನೆಯ ಲೀಗ್‌ನಲ್ಲಿ ಆಸ್ಟ್ರೇಲಿಯಾ ತಂಡ ಓಮನ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಓಮನ್ ತಂಡ 16.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತು.

Advertisement

ಇದನ್ನು ಓದಿ: ಪಾಲುದಾರ ರಾಷ್ಟ್ರಗಳಿಗೆ ಸುಂಕ ವಿಧಿಸುವ ಹಕ್ಕು ನಿಮಗಿಲ್ಲ ಟ್ರಂಪ್: ತುರ್ತು ಅಧಿಕಾರ ಬಳಕೆಗೆ ಅಮೆರಿಕ ಸುಪ್ರೀಂ ಕೋರ್ಟ್ ತಡೆ!

ತಂಡದ ಪರ ವಸೀಮ್ ಅಲಿ 32, ಜತಿಂದರ್ ಸಿಂಗ್ 17, ಹಮ್ಮದ್ ಮಿರ್ಜಾ 16 ರನ್ ಗಳಿಸಿದರು. ಆಸ್ಟ್ರೆಲಿಯಾ ಪರ ಅಡಂ ಜಂಪ 4, ಕ್ಷೇವಿಯರ್ ಬಾರ್ಲೆಟ್, ಗ್ಲೆನ್ ಮ್ಯಾಕ್ಸ್ ವೆಲ್ ತಲಾ 2, ಮಾರ್ಕಸ್ ಸ್ಟಾಯ್ನಿಸ್ ಮತ್ತು ನತನ್ ಎಲಿಸ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 9.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತಂಡದ ಪರ ಮಿಚಲ್ ಮಾರ್ಷ್ ಅಜೇಯ 64, ಟ್ರಾವಿಸ್ ಹೆಡ್ 32, ಜೋಶ್ ಇಂಗ್ಲಿಸ್ 12 ರನ್ ಗಳಿಸಿದರು. ಓಮನ್ ಪರ ಶಕೀಲ್ ಅಹಮ್ಮದ್ ಒಂದು ವಿಕೆಟ್ ಪಡೆದರು.

ಇದರೊಂದಿಗೆ ಟಿ-20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯಾವಳಿಗಳು ಮುಕ್ತಯವಾವು. ನಾಳೆಯಿಂದ ಸೂಪರ್‌-8 ಪಂದ್ಯಾಟ ಪ್ರಾರಂಭವಾಗಲಿದೆ‌.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು