Breaking News

ಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ಮೇಲೆ ದಾಳಿ: ಹಿಂದೂ ಶಿಕ್ಷಕನ ಮನೆ ಬೆಂಕಿಗಾಹುತಿ

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಹಿಂಸಾಕೋರರು ಹಿಂದು ಶಿಕ್ಷಕನೋರ್ವರ ಮನೆಗೆ ಬೆಂಕೆ ಹಚ್ಚಿದ್ದಾರೆ.

ಸಿಲ್ಲೆಟ್‌ನ ಗೋವೈನ್‌ಘಾಟ್ ಉಪಜಿಲ್ಲಾದಲ್ಲಿ ಜುನು ಎಂದೂ ಕರೆಯಲ್ಪಡುವ ಬೀರೇಂದ್ರ ಕುಮಾರ್ ಡೇ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಅದರ ವಿಡಿಯೋ ವೃಯಲ್ ಆಗಿದ್ದು ಅದರಲ್ಲಿ ಕುಟುಂಬ ಸದಸ್ಯರು ಅಡಗಿಕೊಂಡು ತಮ್ಮ ವಸ್ತುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

Advertisement

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಮನೆ ಸಂಪೂರ್ಣವಾಗಿ ಸುಟ್ಟುಹೋಗಿತ್ತು, ಕುಟುಂಬವು ತಮ್ಮ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದೆ.

2024 ರ ಜುಲೈ ದಂಗೆಯ ನಂತರ, ಆಗಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದಲ್ಲಿ ಹೆಚ್ಚಳವನ್ನು ಕಂಡಿದೆ.

ಈ ವಾರದ ಆರಂಭದಲ್ಲಿ ಹಿರಿಯ ಅವಾಮಿ ಲೀಗ್ ನಾಯಕ ಮತ್ತು ಖ್ಯಾತ ಹಿಂದೂ ಸಂಗೀತಗಾರ ಪ್ರೊಲೋಯ್ ಚಾಕಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರೆ, ಚಿತ್ತಗಾಂಗ್‌ನಲ್ಲಿ 28 ವರ್ಷದ ಆಟೋ ಚಾಲಕ ಸಮೀರ್ ದಾಸ್‌ನನ್ನು ಹೊಡೆದು, ಇರಿದು ಕೊಲ್ಲಲಾಯಿತು.

ಇದನ್ನೂ ಓದಿ: ಇರಾನ್ ನಲ್ಲಿ ಅಶಾಂತಿ: ಭಾರತೀಯರ ಸ್ಥಾಳಾಂತರಕ್ಕೆ ಸಿದ್ಧತೆ

ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ಹಿಂಸಾಚಾರದಲ್ಲಿ 24 ಗಂಟೆಗಳ ಒಳಗೆ ಇಬ್ಬರು ಹಿಂದೂಗಳು ಸಾವನ್ನಪ್ಪಿದರು. ನರಸಿಂಗಡಿಯಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಚಕ್ರವರ್ತಿ ಮಣಿ (40) ಕೊಲ್ಲಲ್ಪಟ್ಟರು ಮತ್ತು ಅದೇ ದಿನ ಜಶೋರ್‌ನ ಮಣಿರಾಂಪುರದಲ್ಲಿ ಹಿಂದೂ ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡು ಹಾರಿಸಿ ಕತ್ತು ಸೀಳಲಾಯಿತು.

ಡಿಸೆಂಬ‌ರ್ ಅಂತ್ಯದಲ್ಲಿ ದಕ್ಷಿಣ ಬಾಂಗ್ಲಾದೇಶದ ಪಿರೋಜ್‌ಪುರ ಸದರ್‌ ಉಪಜಿಲ್ಲಾದ ಪಶ್ಚಿಮ್ ದುಮ್ರತಾಲಾ ಗ್ರಾಮದಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿಯಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರಿಗೆ ಸೇರಿದ ಮೂರು ವಸತಿ ಮನೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಮನೆಗಳು ಸಹಾ ಕುಟುಂಬದ ಸದಸ್ಯರಾದ ಪಲಾಶ್ ಕಾಂತಿ ಸಹಾ, ಶಿಬ್‌ ಸಹಾ, ದೀಪಕ್ ಸಹಾ, ಶ್ಯಾಮಲೇಂದು ಸಹಾ ಮತ್ತು ಅಶೋಕ್‌ ಸಹಾ ಅವರಿಗೆ ಸೇರಿದ್ದವು. ಸಂತ್ರಸ್ತ ಕುಟುಂಬಗಳ ಪ್ರಕಾರ, ಬೆಂಕಿಯು ಪೀಠೋಪಕರಣಗಳು, ನಗದು, ಭೂ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಇತರ ಪ್ರಮುಖ ದಾಖಲೆಗಳು ಸೇರಿದಂತೆ ಮನೆಯ ಎಲ್ಲಾ ವಸ್ತುಗಳನ್ನು ನಾಶಪಡಿಸಿದೆ.

ಭಾರತವು ಈ ಹತ್ಯೆಗಳನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು