ಬಂಟ್ವಾಳ: ಮಂಚಿ ಗ್ರಾಮ ಮಟ್ಟದ ಟೈಲರಿಂಗ್ ತರಬೇತಿ ಕಾರ್ಯಕ್ರಮವು ಜ. ೨ ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಮಂಚಿ ಚಿಲುಮೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಮಂಚಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾದ 2 ತಿಂಗಳ ಟೈಲರಿಂಗ್ ತರಬೇತಿ ಕಾರ್ಯಕ್ರಮ ಇದಾಗಿದೆ.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಭಾರತೀಯ ವಿಕಾಸ ಟ್ರಸ್ಟಿನ ಸಂಯೋಜಕ ಜೀವನ್ ಕೊಲ್ಯ ಅವರು ಶಿಬಿರಾರ್ಥಿಗಳಿಗೆ ಶಿಸ್ತು, ಸಮಯ ಪಾಲನೆ, ತರಬೇತಿಯ ಪ್ರಯೋಜನ, ಸ್ವ ಉದ್ಯೋಗದ ಕುರಿತು ಅರಿವು ಮೂಡಿಸಿದರು.

ಇದನ್ನೂ ಓದಿ: ಮಾಣಿ: ಸಾವಿತ್ರಿಬಾಯಿ ಬಾ ಪುಲೆ ಜನ್ಮದಿನ ಪೂರ್ವಚಾರಣೆ ಕಾರ್ಯಕ್ರಮ
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ ಅವರು ಸಂಜೀವಿನಿಯಲ್ಲಿ ದೊರೆಯುವ ಸಮುದಾಯ ಬಂಡವಾಳ ನಿಧಿ, ಗುಂಪು ಚಟುವಟಿಕೆಯ ಕುರಿತ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಜಿ.ಯಂ. ಇಬ್ರಾಹಿಂ ಹಾಗೂ ಪಂಚಾಯತ್ ಉಪಾಧ್ಯಕ್ಷೆ ಗೀತಾ ಅವರು ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: ಮಂಚಿ: ಕೊಳ್ನಾಡು ಪ್ರೌಢಶಾಲೆಯ 48ನೇ ವಾರ್ಷಿಕೋತ್ಸವ
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಆಸ್ಯಾಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ, ವಲಯ ಮೇಲ್ವಿಚಾರಕಿ ದೀಕ್ಷಿತ, ಪಂಚಾಯತ್ ಸದಸ್ಯ ಮಹಮ್ಮದ್, ತರಬೇತಿ ಪ್ರಧ್ಯಾಪಕಿ ಸವಿತಾ ಉಪಸ್ಥಿತರಿದ್ದರು. ಒಕ್ಕೂಟದ ಸಿಬ್ಬಂದಿಗಳು ಹಾಜರಿದ್ದರು. ಶೋಭಾ ಸ್ವಾಗತಿಸಿ, ಕುಶಾಲಾಕ್ಷಿ ವಂದಿಸಿದರು. ಪೂರ್ಣಿಮಾ ನಿರೂಪಿಸಿದರು. ಒಟ್ಟು 27 ಶಿಭಾರಾರ್ಥಿಗಳು ಹಾಜರಿದ್ದರು.

