ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇಶದ ಸುರಕ್ಷತೆಗಾಗಿ ಜ.3 ರಂದು ರಾಷ್ಟ್ರ ವಿಜಯ ಯಜ್ಞ ನಡೆಯಿತು. ಲೋಕ ಕಲ್ಯಾಣ, ರಾಷ್ಟ್ರ, ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಸೇರಿದಂತೆ ದೇಶವಾಸಿಗಳ ರಕ್ಷಣೆಗಾಗಿ ದೇವಾಲಯದ ಪ್ರತಿಷ್ಠಾ ವರ್ಧಂತಿ ಉತ್ಸವದ ದಿನವಾದ ಇಂದು ರಾಷ್ಟ್ರ ವಿಜಯ ಯಾಗ ನಡೆಸಲಾಯಿತು.


ಯಾಗದ ಬಳಿಕ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಹಾಮಂಗಳಾರತಿ ;
ಬೆಳಗ್ಗೆ 7 ಗಂಟೆಗೆ ರಾಷ್ಟ್ರ ವಿಜಯ ಯಾಗ ಆರಂಭವಾಯಿತು. ದೇವಾಲಯದ ಆಡಳಿತ ಮಂಡಳಿಯ ಮಾಜಿ ಮೊಕ್ತೇಸರ ವಿಕಾಸ್ ಪುತ್ತೂರು ದೀಪ ಪ್ರಜ್ವಲನೆ ಮಾಡಿದರು. ವೇ.ಮೂ. ಬಾಲಕೃಷ್ಣ ಭಟ್ ಪಾಲೆಚ್ಚಾರ್ ನೇತೃತ್ವದ ಪುರೋಹಿತ ತಂಡವು ಯಾಗ ನೆರವೇರಿಸಿತು.
ಈ ವೇಳೆ ದೇವಾಲಯದ ಆಡಳಿತ ಮಂಡಳಿ ಮೊಕ್ತೇಸರ ಸತೀಶ್ಚಂದ್ರ ಎಸ್.ಆರ್., ಸದಸ್ಯರಾದ ಗಣೇಶ್ ಕಾಮತ್, ಅರುಣ್ ಕುಮಾರ್, ದಿವಾಕರ್ ನಾಯಕ್, ಆಶ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಯಾಗದ ಬಳಿಕ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ಅನ್ನಸಂತರ್ಪಣೆಯೂ ನಡೆಯಿತು.
ಅನ್ನಸಂತರ್ಪಣೆ ;


