ದಿ ಹಂಡ್ರೆಡ್‌ ಲೀಗ್:‌ ಪಾಕ್‌ ಕ್ರಿಕೆಟಿಗನ ಆಯ್ಕೆ ಬಗ್ಗೆ ಮೌನ ಮುರಿದ ಬಿಸಿಸಿಐ, ಹೇಳಿದ್ದೇನು?

bcci-rajeev-shukla-sunrisers-leeds-abrar-ahmed-hundred

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಆಯೋಜಿಸುವ ‘ದಿ ಹಂಡ್ರೆಡ್’ ಲೀಗ್ ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, “ನಮ್ಮ ವ್ಯಾಪ್ತಿ ಐಪಿಎಲ್ ಮಟ್ಟಕ್ಕೆ ಮಾತ್ರ ಸೀಮಿತ. ಭಾರತ ಹೊರಗಿನ ಲೀಗ್‌ನಲ್ಲಿ ಫ್ರಾಂಚೈಸಿಗಳು ಯಾವ ಆಟಗಾರರನ್ನು ಆಯ್ಕೆ ಮಾಡುತ್ತವೆ ಎಂಬುದಕ್ಕೆ ಬಿಸಿಸಿಐಗೆ ಯಾವುದೇ ಸಂಬಂಧ ಇಲ್ಲ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸನ್‌ರೈಸರ್ಸ್‌ ತಂಡಕ್ಕೆ ಪಾಕ್‌ ಕ್ರಿಕೆಟಿಗನ ಆಯ್ಕೆ; ಕಾವ್ಯ ಮಾರನ್‌ ವಿರುದ್ಧ ಭಾರೀ ಆಕ್ರೋಶ

27 ವರ್ಷದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್, ಪಾಕಿಸ್ತಾನದ ಪರವಾಗಿ ಟೆಸ್ಟ್, ಏಕದಿನ ಮತ್ತು ಟಿ20 ಸೇರಿ ಹಲವು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡದಲ್ಲಿ  ಆಡಲು ಅವರು 1,90,000 (ಸುಮಾರು ₹2.34 ಕೋಟಿ) ಸಂಬಳ ಪಡೆಯಲಿದ್ದಾರೆ.

ಈ ಆಯ್ಕೆಯ ನಂತರ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದು, ಕಳೆದ ವರ್ಷ ನಡೆದ ಇಂಡೋ–ಪಾಕ್ ರಾಜಕೀಯ ಉದ್ವಿಗ್ನತೆಯ ಸಂದರ್ಭದಲ್ಲಿ ಅಬ್ರಾರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ವಾಯುಪಡೆಯ ಬಗ್ಗೆ ಮಾಡಿದ ಕೆಲ ಟೀಕೆಗಳು ಮುನ್ನೆಲೆಗೆ ಬಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು