ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್! ಆಕೆ ಇನ್ನೂ ಅಪ್ರಾಪ್ತೆ?

ಇಂದೋರ್: ಕಳೆದ ವರ್ಷ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ಜಗತ್ಪ್ರಸಿದ್ಧಿಯಾಗಿದ್ದ ಮೊನಾಲಿಸಾ ಭೋಸ್ಲೆ ಅವರ ವೈಯಕ್ತಿಕ ಜೀವನ ಈಗ ದೊಡ್ಡ ವಿವಾದಕ್ಕೆ ಸಿಲುಕಿದೆ. ಉತ್ತರ ಪ್ರದೇಶದ ಫರ್ಮಾನ್ ಖಾನ್ ಎಂಬುವವರನ್ನು ಮದುವೆಯಾಗಿರುವ ಮೊನಾಲಿಸಾ ಅವರು ಇನ್ನೂ ಅಪ್ರಾಪ್ತೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದಾಖಲೆಗಳು ಬಿಡುಗಡೆಯಾಗಿವೆ.

ಇಂದೋರ್ ಮೂಲದ ಮೊನಾಲಿಸಾ ಮಾರ್ಚ್ 11ರಂದು ಕೇರಳದ ತಿರುವನಂತಪುರದ ದೇವಸ್ಥಾನವೊಂದರಲ್ಲಿ ಫರ್ಮಾನ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಯಲ್ಲಿ ಕೇರಳದ ಸಚಿವರು ಮತ್ತು ಸಂಸದರು ಭಾಗವಹಿಸಿದ್ದರು.ಮೊನಾಲಿಸಾ ಅವರಿಗೆ 18 ವರ್ಷ ತುಂಬಿದೆ ಎಂದು ಹೇಳಲಾಗುತ್ತಿತ್ತಾದರೂ, ವಿಶ್ವ ಹಿಂದೂ ಪರಿಷತ್ (VHP) ಈ ವಾದವನ್ನು ತಳ್ಳಿಹಾಕಿದೆ. ಮೊನಾಲಿಸಾ ಅವರಿಗೆ ಇನ್ನೂ 16 ವರ್ಷ ಎಂದು ವಿಎಚ್‌ಪಿ ಆರೋಪಿಸಿದೆ.

Advertisement

ಇದನ್ನೂ ಓದಿ: ತಂದೆಯ ಮನವೊಲಿಕೆಗೂ ಕರಗದ ಮನಸು; ಮುಸ್ಲಿಂ ಯುವಕನೊಂದಿಗೆ ದೇವಸ್ಥಾನದಲ್ಲಿ ಮದುವೆಯಾದ ವೈರಲ್ ಗರ್ಲ್ ಮೊನಾಲಿಸಾ

ವಿಎಚ್‌ಪಿ ಬಿಡುಗಡೆ ಮಾಡಿರುವ ಮಧ್ಯಪ್ರದೇಶ ಸರ್ಕಾರದ ಜನನ ಪ್ರಮಾಣಪತ್ರದ ಪ್ರಕಾರ, ಮೊನಾಲಿಸಾ ಅವರ ಜನ್ಮ ದಿನಾಂಕ ಡಿಸೆಂಬರ್ 30, 2009. ಇದರ ಪ್ರಕಾರ ಆಕೆಗೆ ಈಗ ಕೇವಲ 16 ವರ್ಷ 2 ತಿಂಗಳು. ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ಹಿನ್ನೆಲೆಯಲ್ಲಿ ಈ ಮದುವೆಯು ಕಾನೂನುಬಾಹಿರ ಎಂದು ವಿಎಚ್‌ಪಿ ಡಿಜಿಪಿಗೆ ದೂರು ನೀಡಿದೆ. ಮಧ್ಯಪ್ರದೇಶದಲ್ಲೂ ಈ ಸಂಬಂಧ ಪ್ರಕರಣ ದಾಖಲಾಗಿದೆ.ಆದರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮೊನಾಲಿಸಾ ಮತ್ತು ಫರ್ಮಾನ್, ತಾವು ವಯಸ್ಸಿನ ದೃಢೀಕರಣದ ನಂತರವೇ ಮದುವೆಯಾಗಿದ್ದೇವೆ ಎಂದು ಆರೋಪಗಳನ್ನು ನಿರಾಕರಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು