Breaking News

Bigg Boss Kannada 12 Grand Finale: ಗಿಲ್ಲಿ ನಟ ವಿನ್ನರ್, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌

Bigg Boss Kannada 12 Winner

ನಟ ಕಿಚ್ಚ ಸುದೀಪ್‌ ನಿರೂಪಣೆಯೊಂದಿಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್‌ ಸೀಸನ್‌ 12ರ 110 ದಿನಗಳ ಸ್ಪರ್ಧಾ ಹೋರಾಟ ಅಂತ್ಯಗೊಂಡಿದೆ. ಇಂದು (ಜ.18) ಸೀಸನ್‌ 12ರ ವಿನ್ನರ್‌ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಗಿಲ್ಲಿ ನಟ ಅವರು ವಿನ್ನರ್‌ ಆಗಿ ಮಿಂಚಿದ್ದಾರೆ. ಇನ್ನು, ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದಾರೆ.

ಎರಡನೇ ರನ್ನರ್‌ಅಪ್‌ ಆಗಿ ಅಶ್ವಿನಿ ಗೌಡ, ಮೂರನೇ ರನ್ನರ್‌ಅಪ್‌ ಆಗಿ ಕಾವ್ಯ ಶೈವ ಅವರು ಹೊರಹೊಮ್ಮಿದ್ದಾರೆ. ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದ ರಘು ಅವರು ಐದನೇ ಸ್ಥಾನದೊಂದಿಗೆ ಹೊರಬಂದರು. ಆರನೇ ಸ್ಥಾನದೊಂದಿಗೆ ಧನುಷ್‌ ಗೌಡ ಅವರು ಬಿಗ್‌ಬಾಸ್‌ ಮನೆಯಿಂದ ಹೊರನಡೆದರು.

Advertisement

ವಿನ್ನರ್‌ ಗಿಲ್ಲಿ ಅವರಿಗೆ ಅಶ್ವಸೂರ್ಯ ಅವರ ಕಡೆಯಿಂದ 50 ಲಕ್ಷ ನಗದು ಹಾಗೂ ಮಾರುತಿ ಸುಜುಕಿ ಕಾರು ಬಹುಮಾನವಾಗಿ ಪಡೆದರು. ಕಳೆದ ವರ್ಷ ಪರಿಚಯಿಸಲಾದ ಮಾರುತಿ ವಿಕ್ಟೋರಿಸ್ ಕಾರು ಇದಾಗಿದ್ದು, 1490 ಸಿಸಿ ಇಂಜಿನ್ ಹೊಂದಿದೆ. ಗ್ಲೋಬಲ್ ಕ್ಯಾಪ್​​​ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಅಲ್ಲದೆ, ಗಿಲ್ಲಿ ಅವರಿಗೆ ಕಿಚ್ಚ ಸುದೀಪ್‌ ಅವರು ವೈಯಕ್ತಿವಾಗಿ 10 ಲಕ್ಷ ರೂ. ನೀಡಿದರು. ರನ್ನರ್‌ಅಪ್‌ ಆಗಿರುವ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್‌ ಪ್ಯಾಲೆಸ್‌ ಕಡೆಯಿಂದ 20 ಲಕ್ಷ ನಗದು ಬಹುಮಾನ ಪಡೆದರು. ಅಲ್ಲದೆ, ಜಾರ್‌ ಆಪ್‌ ಕಡೆಯಿಂದ 5 ಲಕ್ಷ ರೂ. ನೀಡಲಾಯಿತು.

ಇದನ್ನೂ ಓದಿ: New Movie: ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಕಣ್ಣೀರ ಕಣ್ಮಣಿ ರಾಶಿಕಾ

ಬಿಗ್​​ಬಾಸ್ ಕನ್ನಡ ಮನೆಯಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ್ದು ಯಾರು ಎಂದು ಹೆಸರನ್ನೂ ಘೋಷಿಸಲಾಗಿದೆ. ಅದರಂತೆ, ಕಣ್ಣೀರ ಕಣ್ಮಣಿ ಪಟ್ಟವನ್ನು ರಾಶಿಕಾಗೆ ನೀಡಲಾಗಿದ್ದು, 1 ಲಕ್ಷ ನಗದು ಬಹುಮಾನವನ್ನೂ ನೀಡಲಾಯಿತು.

ಧ್ರುವಂತ್‌ ಮೈ-ಕೈ ಜಾಕ್ಸನ್

ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಧ್ರುವಂತ್‌ ಅವರ ಡಾನ್ಸ್‌ಗೆ ಮೈ-ಕೈ ಜಾಕ್ಸನ್‌ ಪ್ರಶಸ್ತಿ ಒಲಿದಿದೆ. ಧ್ರುವಂತ್‌ ಅವರ ಡಾನ್ಸ್‌ ಅನ್ನು ಗುರುತಿಸಿ 1 ಲಕ್ಷ ನಗದು ಬಹುಮಾನದೊಂದಿಗೆ ಈ ಪ್ರಶಸ್ತಿ ನೀಡಲಾಗಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು