ಮಣಿಪಾಲ: ಕಳ್ಳರಿಬ್ಬರು ಬೈಕ್ ಕದ್ದು ಪರಾರಿಯಾಗಿದ್ದು. ಅವರನ್ನು ಕೇವಲ 11 ಗಂಟೆಗಳ ಒಳಗೆ ಬಂಧಿಸಿ ಪೊಲೀಸರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಡಗುಬೆಟ್ಟು ಗ್ರಾಮದ ರಾಹುಲ್ನಗರದ ವೀರ ಮಾರುತಿ ಭಜನಾ ಮಂದಿರ ಬಳಿ ಸುದರ್ಶನ್ ಎಂಬವರು ಫೆ.21ರಂದು ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಪುತ್ತೂರು: ದೈಹಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿದ ಪ್ರಕರಣ: ಖಿನ್ನತೆಗೆ ಒಳಗಾಗಿ ಯುವತಿ ಆತ್ಮಹತ್ಯೆಗೆ ಯತ್ನ
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ 11 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಶದಲ್ಲಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳನ್ನು ಬಡಗಬೆಟ್ಟು ಗ್ರಾಮದ ನೇತಾಜಿನಗರ ನಿವಾಸಿ ಶರತ್ (26) ಹಾಗೂ ಗಣೇಶ್ (31) ಎಂದು ಗುರುತಿಸಲಾಗಿದೆ.
ಬಂಧಿತರ ವಿರುದ್ಧ ಮಣಿಪಾಲ, ಉಡುಪಿ ನಗರ, ಭದ್ರಾವತಿ, ಕೊಪ್ಪ ತೀರ್ಥಹಳ್ಳಿ ಮಡಿಕೇರಿ ಹಾಗೂ ತುಮಕೂರು ಪೊಲೀಸ್ ಠಾಣೆಗಳಲ್ಲಿ 11ಕ್ಕೂ ಅಧಿಕ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

