ಮದುವೆಗೂ ಮೊದಲೇ ಗರ್ಭಿಣಿ ಮಾಡಿ, ಕೊಲೆಗೆ ಯತ್ನಿಸಿ ಚರಂಡಿಗೆ ಎಸೆದ ಪಾಪಿ: ಇಡೀ ರಾತ್ರಿ ಕಾಡಿನಲ್ಲಿದ್ದು ಬಸ್ ಏರಿ ಠಾಣೆಗೆ ಬಂದ ಯುವತಿ

karkala-auto-driver-arrested-minor-Physical-harassment-case-kannada

ಸುಬ್ರಹ್ಮಣ್ಯ ಳ ಪ್ರೀತಿಸಿದ ಗರ್ಭಿಣಿ ಯುವತಿಯನ್ನು ಬಿಸಿಲೆ ಘಾಟ್‌ನ ದುರ್ಗಮ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆಕೆಯು ಮೃತಪಟ್ಟಿದ್ದಾಳೆ ಎಂದು ಭಾವಿಸಿ ರಸ್ತೆಬದಿಯ ಚರಂಡಿಗೆ ಎಸೆದು ಪರಾರಿಯಾಗಿದ್ದ ಕೊಂಬಾರಿನ ಆರೋಪಿ ಯುವಕನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೋಣಾಜೆ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೊಂಬಾರು ಮೂಲದ ಯುವತಿಯನ್ನು ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪೊಲೀಸ್ ಮೂಲಗಳ ಪ್ರಕಾರ ಕಡಬ ತಾಲೂಕಿನ ಕೋಣಾಜೆ ಯುವಕ ಪ್ರಸಾದ್ ಹಾಗೂ ಕೊಂಬಾರಿನ ಯುವತಿಯ ನಡುವೆ ಪ್ರೇಮ ಸಂಬಂಧವಿತ್ತು. ಯುವತಿ ಪ್ರಸ್ತುತ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ನವೆಂಬರ್ 4 ರ ಸಂಜೆ ಆರೋಪಿ ಪ್ರಸಾದ್ ಯುವತಿಯನ್ನು ಬಿಸಿಲೆ ಘಾಟ್ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಯುವತಿ ಪ್ರಜ್ಞೆ ತಪ್ಪಿ ಬಿದ್ದಾಗ, ಆಕೆ ಮೃತಪಟ್ಟಿದ್ದಾಳೆ ಎಂದೇ ಭಾವಿಸಿದ ಆರೋಪಿ ಆಕೆಯನ್ನು ಅರಣ್ಯದ ನಡುವಿನ ಚರಂಡಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದನು.

 ಘೋರ ಅರಣ್ಯದ ನಡುವೆ ಚರಂಡಿಯಲ್ಲೇ ಇಡೀ ರಾತ್ರಿಯನ್ನು ಕಳೆದ ಗಾಯಾಳು ಯುವತಿ, ಮರುದಿನ ಬೆಳಿಗ್ಗೆ ಹೇಗೋ ಚೇತರಿಸಿಕೊಂಡು ಬಸ್ ಏರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾಳೆ.

Advertisement

ಇದನ್ನೂ ಓದಿ: ಉಡುಪಿಯಲ್ಲಿ ನಡುರಾತ್ರಿ ಭೀಕರ ಕೃತ್ಯ: ರೌಡಿ ಶೀಟರ್ ಸುಜಿತ್ ಪಿಂಟೋ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರ ಕೊಲೆ

ಬೇರೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಕೃತ್ಯ; ಆರೋಪಿ ಅರೆಸ್ಟ್!

ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಠಾಣೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ನವೆಂಬರ್ 5 ರಂದು ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹವೊಂದರಲ್ಲಿ ಕರ್ತವ್ಯದಲ್ಲಿದ್ದ ಆರೋಪಿ ಪ್ರಸಾದ್‌ನನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಯಸಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿ ಪ್ರಸಾದ್‌ಗೆ ಇತ್ತೀಚೆಗೆ ಬೇರೊಂದು ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಗರ್ಭಿಣಿಯಾಗಿದ್ದ ಪ್ರೇಯಸಿಯನ್ನು ತೊಲಗಿಸಿಕೊಳ್ಳಲು ಈ ಭೀಕರ ಕೊಲೆ ಸಂಚು ರೂಪಿಸಿದ್ದಾನೆ ಎಂಬ ಮಾತುಗಳು ಕೇಳಿಬಂದಿವೆ. ಸಂತ್ರಸ್ತ ಯುವತಿ ಕೂಡ ಸುಬ್ರಹ್ಮಣ್ಯದಲ್ಲೇ ಖಾಸಗಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ