ಯಲ್ಲಾಪುರ: ಮದುವೆಯಾಗಲು ನಿರಾಕರಿಸಿದಳೆಂದು ರಫೀಕ್ ಎಂಬಾತನ ಕೈಯಿಂದ ಕೊಲೆಗೀಡಾದ ಹಿಂದೂ ಮಹಿಳೆಯ ಕುಟುಂಬದ ನೆರವಿಗೆ ರಾಜ್ಯ ಬಿಜೆಪಿ ದಾವಿಸಿದೆ. ಇಂದು ರಂಜಿತಾಳ ಕುಟುಂಬಸ್ಥರನ್ನು ಭೇಟಿಯಾದ ಬಿಜೆಪಿ ಮುಖಂಡರು, 5 ಲಕ್ಷ ರೂಪಾಯಿ ಪರಿಹಾರ ಧನ ನೀಡಿದರು. ಅಲ್ಲದೆ, ಆಕೆಯ ಮಗುವಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ವಹಿಸಿಕೊಂಡಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ ರಾಜ್ಯ ಬಿಜೆಪಿ, “ಯಲ್ಲಾಪುರದಲ್ಲಿ ಮತಾಂಧ ರಫೀಕ್‌ನಿಂದ ಬರ್ಬರವಾಗಿ ಹತ್ಯೆಗೊಳಗಾದ ಹಿಂದೂ ಮಹಿಳೆ ರಂಜಿತಾಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿ, ಮಗುವಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ವಹಿಸಿಕೊಂಡಿದೆ.” ಎಂದು ಬರೆದುಕೊಂಡಿದೆ.

ಯಲ್ಲಾಪುರದಲ್ಲಿ ಮತಾಂಧ ರಫೀಕ್ ನಿಂದ ಬರ್ಬರವಾಗಿ ಹತ್ಯೆಗೊಳಗಾದ ಹಿಂದೂ ಮಹಿಳೆ ರಂಜಿತಾಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿ, ಮಗುವಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ವಹಿಸಿಕೊಂಡಿದೆ.#CongressFailsKarnataka pic.twitter.com/VXohPA0p1A
— BJP Karnataka (@BJP4Karnataka) January 8, 2026
ರಂಜಿತಾಳ ಹತ್ಯೆ ಪ್ರಕರಣ
ಮದುವೆಗೆ ನಿರಾಕರಿಸಿದ ಹಿಂದೂ ಮಹಿಳೆಯನ್ನು ಮುಸ್ಲಿಂ ಯುವಕ ಕತ್ತು ಸೀಳಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿತ್ತು. ವಿವಾಹಿತ ಮಹಿಳೆಯಾಗಿರುವ ರಂಜಿತ, ಪತಿಯಿಂದ ವಿಚ್ಛೇದನ ಪಡೆದು ತನ್ನ ಮಗನೊಂದಿಗೆ ತಂದೆ, ತಾಯಿ ಹಾಗೂ ಅಣ್ಣನೊಂದಿಗೆ ನೆಲೆಸಿದ್ದಳು. ಆದರೆ, ಕೆಲವು ವರ್ಷಗಳ ಹಿಂದೆ ರಂಜಿತಾಳೊಂದಿಗೆ ರಫೀಕ್ ಪರಿಚಯ ಮಾಡಿಕೊಂಡಿಕೊಂಡಿದ್ದಾನೆ. ಅಲ್ಲದೆ, ಕುಟುಂಬಸ್ಥರನ್ನು ಪರಿಚಯಿಸಿಕೊಂಡ ಆತ, ಬಳಿಕ ತನ್ನನ್ನು ಮದುವೆಯಾಗುವಂತೆ ರಂಜಿತಾಳನ್ನು ಪೀಡಿಸುತ್ತಿದ್ದನು.
ಇದನ್ನೂ ಓದಿ: ಪುತ್ತೂರು: ತನ್ನ ಮಗಳ ಮೇಲೆಯೇ ತಂದೆಯಿಂದ ಲೈಂಗಿಕ ದೌರ್ಜನ್ಯ! ಆರೋಪಿ ಅರೆಸ್ಟ್
ಆದರೆ, ರಫೀಕ್‌ನ ಮದುವೆ ಪ್ರಸ್ತಾಪವನ್ನು ರಂಜಿತಾ ಸ್ಪಷ್ಟವಾಗಿ ನಿರಾಕರಿಸಿದ್ದಳು. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳಗಳು ನಡೆಯುತ್ತಿದ್ದವು. ರಾಮಪುರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಈಕೆ, ಎಂದಿನಂತೆ ಶನಿವಾರ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಅಡ್ಡಗಡ್ಡಿದ ರಫೀಕ್, ಚಾಕುವಿನಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದನು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ರಂಜಿತಾ ಮೃತಪಟ್ಟಿದ್ದರು. ಇತ್ತ, ಕೃತ್ಯ ಎಸಗಿದ ನಂತರ ರಫೀಕ್ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

