Breaking News

U19 Worldcup: ಹೆನಿಲ್ ದಾಳಿಗೆ 5 ವಿಕೆಟ್ ಪತನ: ಯುಎಸ್ಎ ವಿರುದ್ಧ ಭಾರತಕ್ಕೆ ಗೆಲುವು

ಬುಲವಾಯೊ: ಜಿಂಬಾಬ್ವೆ ಮತ್ತು ನೆಮಿಬೀಯಾದ ಜಂಟಿ ಆಶ್ರಯದಲ್ಲಿ ನಡೆಯಿತ್ತಿರುವ U-19 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ಯುಎಸ್ಎ ತಂಡದ ವಿರುದ್ದ ಗೆಲುವು ಸಾಧಿಸುವುದರ ಮುಖಾಂತರ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.

ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಅಮೆರಿಕ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮಳೆಯಿಂದಾಗಿ 37 ಓವರ್‌ಗಳಲ್ಲಿ 96 ರನ್‌ಗಳ ಪರಿಷ್ಕೃತ DLS ಗುರಿಯನ್ನು ಬೆನ್ನಟ್ಟಿ ಗೆಲುವನ್ನು ತನ್ನದಾಗಿಸಿಕೊಂಡಿತು.

Advertisement

ರನ್ ಹೊಳೆ ಹರಿಸಲು ವಿಫಲವಾದ ಸೂರ್ಯವಂಶಿ

ಚೇಸಿಂಗ್ ವೇಳೆ ಭಾರತ ಆರಂಭಿಕ ಆಘಾತವನ್ನು ಎದುರಿಸಿತ್ತು. ಸ್ಟಾರ್ ಓಪನರ್ ವೈಭವ್ ಸೂರ್ಯವಂಶಿ ಕೇವಲ 2 ರನ್‌ಗಳಿಗೆ ಬೇಗನೆ ಔಟಾದರು. ಈ ಹಿಂದಿನ ಸರಣಿಯಲ್ಲಿ ಚೆಂಡನ್ನು ಬೌಂಡರಿಯ ಮೂಲೆ ಮೂಲೆಗೆ ಅಟ್ಟುತ್ತಿದ್ದ ವೈಭವ್ ಇಂದು ರಿತ್ವಿಕ್ ಅಪ್ಪಿಡಿ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವುದರ ಮೂಲಕ ನಿರಾಸೆ ಮೂಡಿಸಿದರು.

ಮಳೆ ವಿರಾಮದ ನಂತರ ತಂಡವು 29/3 ರೊಂದಿಗೆ ಸಂಕಷ್ಟದಲ್ಲಿ ಸಿಲುಕಿತು. ಆದಾಗ್ಯೂ, ಅಭಿಗ್ಯಾನ್ ಕುಂಡು ಅಜೇಯ 42 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅವರಿಗೆ ವಿಹಾನ್ ಮಲ್ಹೋತ್ರಾ ಮತ್ತು ಕನಿಷ್ಕ್ ಚೌಹಾಣ್ ಉತ್ತಮ ಬೆಂಬಲ ನೀಡಿದರು, ಭಾರತವು ಇನ್ನು 20 ಓವರ್‌ಗಳು ಬಾಕಿ ಇರುವಂತೆ 6 ವಿಕೆಟ್‌ಗಳ ಸುಲಭ ಗುರಿಯನ್ನು ತಲುಪಿತು.

ಇದನ್ನೂ ಓದಿ: Belthangady: ನಿಗೂಢವಾಗಿ ಸಾವನ್ನಪ್ಪಿದ ಸುಮಂತ್ ಕೇಸ್‌ಗೆ ಟ್ವಿಸ್ಟ್: ಕೆರೆಯಲ್ಲಿ ಮಾರಕಾಸ್ತ್ರ ಪತ್ತೆ

ವೇಗಿಗಳ ದಾಳಿಗೆ ತತ್ತರಿಸಿದ ಯುಎಸ್ಎ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಯುಎಸ್ಎ ಭಾರತದ ವೇಗಿಗಳ ದಾಳಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಹಾದಿ ಹಿಡಿದರು. ಹೆನಿಲ್ ಪಟೇಲ್ ಏಳು ಓವರ್‌ಗಳಲ್ಲಿ ಒಂದು ಮೇಡೆನ್‌ನೊಂದಿಗೆ 7 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸಿದರು. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ದೀಪೇಶ್, ಅಂಬರೀಶ್, ಕಿಲನ್ ಪಟೇಲ್, ವೈಭವ್ ಸೂರ್ಯವಂಶಿ ತಲಾ ಒಂದು ವಿಕೆಟ್ ಪಡೆದರು‌.

ಯುಎಸ್ಎ 35.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 107 ರನ್ ಗಳಿಸಲಷ್ಟೇ ಶಕ್ತವಾಯ್ತು. ತಂಡದ ಪರ ನಿತೀಶ್ ಸುನಿದಿ 36 ರನ್ ಗಳಿಸಿದರು.

ಫೇವರೆಟ್ ತಂಡ ಆಗಿರುವ ಭಾರತ ತನ್ನ ಮುಂದಿನ ಪಂದ್ಯಾವಳಿಯನ್ನು ಶನಿವಾರ ಬಾಂಗ್ಲಾ ದೇಶದ ವಿರುದ್ದ ಆಡಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು