ರಾಜ್ಯ
ಶಾಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತ : ರೋಟರಿ ಕ್ಲಬ್ ಬಿ.ಸಿ ರೋಡ್ ಘಟಕ
ರೋಟರಿ ಕ್ಲಬ್ ನ ಬಿಸಿ ರೋಡ್ ಘಟಕವು ಶಾಲೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಯಾವಾಗಲೂ ಸಹಾಯ ಹಸ್ತವನ್ನು ನೀಡುತ್ತಲೇ ಇರುತ್ತದೆ. ಇದೀಗ ಸರಕಾರಿ ಪ್ರೌಢಶಾಲೆ ಕೊಯ್ಲಾದಲ್ಲಿ ಶಾಲಾ ಕಚೇರಿಗೆ ಅಗತ್ಯವಾಗಿರುವ ಒಂದು ಕಂಪ್ಯೂಟರ್, ಒಂದು ಯುಪಿಎಸ್ ಮತ್ತು ಒಂದು ಪ್ರಿಂಟರನ್ನು ಕೊಡುಗೆಯಾಗಿ ನೀಡಿದೆ.
Read Moreಸ್ವಸ್ತಿಕ್ ಪ್ರೀಮಿರ್ ಲೀಗ್-1 ಕ್ರಿಕೆಟ್ ಟೂರ್ನಮೆಂಟ್: ನವೀನ್ ಶೆಟ್ಟಿ ತಂಡ ಚಾಂಪಿಯನ್
ಪುತ್ತೂರು: ಮರಿಲ್ ಬಳಿ ಇರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಜ.20 ರಂದು ನಡೆದ ನಮ್ಮ ಶಿಫ್ಟ್ ಅರ್ಪಿಸುವ ಸ್ವಸ್ತಿಕ್ ಪ್ರೀಮಿಯರ್ ಲೀಗ್ ಸೀಸನ್-1 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ನವೀನ್ ಶೆಟ್ಟಿ ನಾಯಕತ್ವದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
Read Moreಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ
ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
Read Moreಸಹಕಾರಿ ಸೌಹಾರ್ದ ಚುನಾವಣೆ: ಸುನಿಲ್ ಬೋರ್ಕರ್ ನೇತೃತ್ವದ ತಂಡ ಅಖಾಡಕ್ಕೆ
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚೊಚ್ಚಲ ಚುನಾವಣೆಗೆ ಒಟ್ಟು ಏಳು ಮಂದಿ ಸ್ಪರ್ಧಿಸುತ್ತಿದ್ದೇವೆ ಎಂದು ಸುನಿಲ್ ಬೋರ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read Moreಗದಗ: ಲಕ್ಕುಂಡಿ ಮನೆಯಲ್ಲಿ ಪತ್ತೆಯಾಯ್ತು 10ನೇ ಶತಮಾನದ ದೇಗುಲ
ಗದಗ: ಐತಿಹಾಸಿಕ ತಾಣ ಲಕ್ಕುಂಡಿ ಅಕ್ಷರಶಃ ಅಚ್ಚರಿಗಳ ತವರು. ಇಲ್ಲಿನ ಮಣ್ಣಿನ ಕಣಕಣದಲ್ಲೂ ಇತಿಹಾಸ ಅಡಗಿದೆ ಎನ್ನುವುದಕ್ಕೆ ಇದೀಗ ಮತ್ತೊಂದು ಜೀವಂತ ಸಾಕ್ಷಿ ಲಭ್ಯವಾಗಿದೆ. ಗ್ರಾಮದ ಕುಂಬಾರ ಓಣಿಯಲ್ಲಿರುವ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದ್ದು, ಇಡೀ ನಾಡಿನ ಗಮನ ಸೆಳೆಯುತ್ತಿದೆ.
Read MoreMangalore : ಕರಾವಳಿಗೆ ಬೇಕಿದೆ ಸುಸಜ್ಜಿತ ಚಿತ್ರಮಂದಿರಗಳು: ರಾಜ್ ಬಿ ಶೆಟ್ಟಿ
ಕರಾವಳಿ ಕರ್ನಾಟಕದಲ್ಲಿ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಇನ್ನಷ್ಟು ಚಿತ್ರಮಂದಿರಗಳನ್ನು ತೆರೆಯಬೇಕಾಗಿದೆ ಎಂದು ರಾಜ್ ಬಿ. ಶೆಟ್ಟಿ ಹೇಳಿದರು.
Read MoreTamilnadu : ಭಾಷಣ ಓದದೆ ಹೊರ ನಡೆದ ತಮಿಳುನಾಡು ರಾಜ್ಯಪಾಲ, ನಿರ್ಣಯ ಅಂಗೀಕರಿಸಿದ ವಿಧಾನಸಭೆ
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿ ಮುಂದುವರಿದಿದೆ. ರಾಜ್ಯಪಾಲರ ಭಾಷಣದೊಂದಿಗೆ ವಿಧಾನಸಭೆ ಅಧಿವೇಶನ ಆರಂಭವಾಗುವುದು ರೂಢಿ. ಅದರೆ, ತಮಿಳುನಾಡಿನಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಓದದೆ ವಿಧಾನಸಭೆಯಿಂದ ಹೊರನಡೆದ ಮತ್ತು ಅವರ ಭಾಷಣವನ್ನು ‘ಓದಲಾಗಿದೆ’ ಎಂದು ಪರಿಗಣಿಸಿ ವಿಧಾನಸಭೆಯು ನಿರ್ಣಯವನ್ನು ಅಂಗೀಕರಿಸಿದ ಪ್ರಸಂಗ ಇಂದು ನಡೆದಿದೆ.
Read MorePuttur : ಕಳ್ಳತನ್ನ ತಪ್ಪಿಸಲು ಚಪ್ಪಲ್ ಗೆ ಬೀಗದ ಭದ್ರತೆ!
ಪುತ್ತೂರಿನ ಸಭಾಭವನವೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಸಭಾಂಗಣದ ಒಳಗೆ ಹೋದವರೆಲ್ಲರೂ ಚಪ್ಪಲಿ ಹೊರಗಿಟ್ಟು ತೆರಳಿದ್ದರು. ಎಲ್ಲರೂ ಸಭಾ ಭವನದ ಪ್ರವೇಶ ದ್ವಾರದ ಬಳಿ ಚಪ್ಪಲಿ ಇಟ್ಟು ತೆರಳಿದ್ದರು. ಆದರೆ ಇದೇ ಸಭಾಂಗಣದ ಸ್ವಲ್ಪ ದೂರದಲ್ಲಿ ಬೀಗ ಹಾಕಿದ ಚಪ್ಪಲಿಯನ್ನು ಕಂಡು ಒಮ್ಮೆಲೆ ಆಶ್ಚರ್ಯವಾಯಿತು. ಹಳೆಯ ಎರಡು ಚಪ್ಪಲಿಗಳ ಬಾರವನ್ನು ಜೋಡಿಸಿ ಹಳೆಯ ಬೀಗವನ್ನು ಜಡಿಯಲಾಗಿತ್ತು. ಇದು ಚಪ್ಪಲಿ ಕದಿಯದಿರಲಿ ಎಂಬ ಉದ್ದೇಶದಿಂದ ಆ ವ್ಯಕ್ತಿ ಬೀಗ ಹಾಕಿದ್ದಾಗಿದೆ. ಹಲವು ಬಾರಿ ಇವರ ಚಪ್ಪಲಿ ಕಳುವಾದ ಬಳಿಕ ಬೀಗ ಹಾಕುವ ತೀರ್ಮಾನಕ್ಕೆ ಬಂದಿರುವುದಾಗಿದೆ.
Read MorePuttur : ಕಟಾರದಲ್ಲಿ ವಾಮಾಚಾರ ಶಂಕೆ: ಸ್ಥಳೀಯರಲ್ಲಿ ಆತಂಕ
ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಪ್ರದೇಶದಲ್ಲಿ ಶಂಕಿತ ವಾಮಾಚಾರ ಕೃತ್ಯ ನಡೆದಿರುವ ಅನುಮಾನದಿಂದ ಭಾನುವಾರ (ಜ.18) ಸ್ಥಳೀಯ ನಿವಾಸಿಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು.
Read MoreBellary: ಮಾಜಿ ಶಾಸಕ ಶ್ರೀರಾಮುಲು ವಿರುದ್ಧ ಪೋಕ್ಸೋ ಪ್ರಕರಣ
ಬಳ್ಳಾರಿ: ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಬೆಳವಣಿಗೆಯೊಂದರಲ್ಲಿ, ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Read More
