ಶಾಲಾ ಆವರಣದಲ್ಲಿ ಅಸಭ್ಯ ವರ್ತನೆ: ಟವೆಲ್ ಸುತ್ತಿಕೊಂಡು ಯುವತಿಯರ ಡ್ಯಾನ್ಸ್! ಮಕ್ಕಳ ಮುಂದೆಯೇ ಮಿತಿಮೀರಿದ ‘ಮೋಡರ್ನ್’ ಕಲ್ಚರ್?

ಶಾಲೆಯೆಂದರೆ ಸಂಸ್ಕಾರ ಮತ್ತು ಶಿಸ್ತಿನ ಪಾಠ ಕಲಿಯುವ ದೇಗುಲ. ಆದರೆ ಇಲ್ಲೊಂದು ಪ್ರತಿಷ್ಠಿತ ಸಿಬಿಎಸ್ಇ ಶಾಲೆಯ ಕಾರ್ಯಕ್ರಮವೊಂದರಲ್ಲಿ ಯುವತಿಯರು ಟವೆಲ್ ಸುತ್ತಿಕೊಂಡು ಅಸಭ್ಯವಾಗಿ ನೃತ್ಯ ಮಾಡಿರುವುದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಹದಿಹರೆಯದ ವಿದ್ಯಾರ್ಥಿಗಳ ಮುಂದೆಯೇ ಈ ರೀತಿಯ ಪ್ರದರ್ಶನ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಶಾಲೆಯ ವಾರ್ಷಿಕೋತ್ಸವ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೇದಿಕೆಯ ಮೇಲೆ ಯುವತಿಯರು ಕೇವಲ ಟವೆಲ್ ಸುತ್ತಿಕೊಂಡಿರುವಂತೆ ಉಡುಗೆ ಧರಿಸಿ, ಚಿತ್ರರಂಗದ ದ್ವಂದ್ವಾರ್ಥದ ಹಾಡುಗಳಿಗೆ ಆಕ್ಷೇಪಾರ್ಹವಾಗಿ ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಇದಾ ನೀವು ಮಕ್ಕಳಿಗೆ ನೀಡುವ ಶಿಕ್ಷಣ?” ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿರುತ್ತಾರೆ. ಅಂತಹ ಎಳೆಯ ಮನಸ್ಸುಗಳ ಮುಂದೆ ಇಂತಹ ನಗ್ನತೆಯ ಪ್ರದರ್ಶನ ಮಾಡುವುದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.ಇಂತಹ ನೃತ್ಯಕ್ಕೆ ಅವಕಾಶ ನೀಡಿದ ಶಾಲಾ ಪ್ರಾಂಶುಪಾಲರು ಮತ್ತು ಕಾರ್ಯಕ್ರಮ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: Big News: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾಗೆ ಮುಸ್ಲಿಂ ಯುವಕನೊಂದಿಗೆ ಲವ್: ಪೊಲೀಸರ ಮೊರೆ ಹೋದ ಜೋಡಿ

ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ಅಥವಾ ನೋಟಿಸ್ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಸಿಬಿಎಸ್ಇ ಬೋರ್ಡ್‌ಗೆ ದೂರು ನೀಡಲು ಪೋಷಕರ ಸಂಘಟನೆಗಳು ಮುಂದಾಗಿವೆ.ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಪಾಶ್ಚಿಮಾತ್ಯ ಅಂಧಾನುಕರಣೆ ಮಾಡುತ್ತಾ ಭಾರತೀಯ ಸಂಸ್ಕೃತಿಯನ್ನು ಅವಹೇಳನ ಮಾಡಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ