ದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) 2025ನೇ ಸಾಲಿನ ಸಿವಿಲ್ ಸರ್ವಿಸಸ್ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 958 ಅಭ್ಯರ್ಥಿಗಳು ಐಎಎಸ್ (IAS), ಐಪಿಎಸ್ (IPS) ಮತ್ತು ಐಎಫ್‌ಎಸ್ (IFS) ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಶಿಫಾರಸು ಮಾಡಲ್ಪಟ್ಟಿದ್ದಾರೆ.ಉತ್ತರ ಪ್ರದೇಶದ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ 1ನೇ ಶ್ರೇಣಿ (AIR 1) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ರಾಜೇಶ್ವರಿ ಸುವೆ ಅವರು 2ನೇ ಶ್ರೇಣಿ (AIR 2) ಪಡೆದು ಮಹಿಳಾ ಅಭ್ಯರ್ಥಿಗಳಲ್ಲಿ ದೇಶಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆಒಟ್ಟು 958 ಅಭ್ಯರ್ಥಿಗಳ ಪೈಕಿ ಸಾಮಾನ್ಯ ವರ್ಗದ 317, ಇಡಬ್ಲ್ಯೂಎಸ್ (EWS) 104, ಓಬಿಸಿ (OBC) 306, ಎಸ್‌ಸಿ (SC) 158 ಮತ್ತು ಎಸ್‌ಟಿ (ST) ವರ್ಗದ 73 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಕರ್ತವ್ಯ ನಿರ್ಲಕ್ಷ್ಯ: ಪುತ್ತೂರು ಸರಕಾರಿ ಪ್ರ.ದ. ಕಾಲೇಜು ಪ್ರಾಂಶುಪಾಲೆ ಅಮಾನತು
ಈ ಫಲಿತಾಂಶದ ಆಧಾರದ ಮೇಲೆ ಐಎಎಸ್‌ಗೆ 180, ಐಎಫ್‌ಎಸ್‌ಗೆ 37 ಮತ್ತು ಐಪಿಎಸ್‌ಗೆ 200 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

