ಜಿನಿವಾ: ಹವಾಮಾನ ಬದಲಾವಣೆಯು ಕೇವಲ ಪರಿಸರದ ಮೇಲೆ ಮಾತ್ರವಲ್ಲದೆ, ಮಾನವನ ಆರೋಗ್ಯದ ಮೇಲೆಯೂ ಭೀಕರ ಪರಿಣಾಮ ಬೀರಲಿದೆ. ವಿಶ್ವ ಆರ್ಥಿಕ ವೇದಿಕೆಯು ‘ಆಲಿವರ್ ವೈಮನ್’ ಸಂಸ್ಥೆಯ ಸಹಯೋಗದೊಂದಿಗೆ ಸಿದ್ಧಪಡಿಸಿದ “ಕ್ವಾಂಟಿಫೈಯಿಂಗ್ ದಿ ಇಂಪ್ಯಾಕ್ಟ್ ಆಫ್ ಕ್ಲೈಮೇಟ್ ಚೇಂಜ್ ಆನ್ ಹ್ಯೂಮನ್ ಹೆಲ್ತ್” ವರದಿಯಲ್ಲಿ ಈ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ.
ಹವಾಮಾನ ವೈಪರೀತ್ಯದಿಂದ ಉಂಟಾಗುವ ಪ್ರಕೃತಿ ವಿಕೋಪಗಳು ಮತ್ತು ರೋಗಗಳ ಹರಡುವಿಕೆಯಿಂದಾಗಿ 2050ರ ವೇಳೆಗೆ ಸುಮಾರು 1.45 ಕೋಟಿ ಜನರು ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿದೆ.ಹವಾಮಾನ ಬದಲಾವಣೆಯು ಜಾಗತಿಕವಾಗಿ 12.5 ಟ್ರಿಲಿಯನ್ ಡಾಲರ್ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚುತ್ತಿರುವ ರೋಗರುಜಿನಗಳಿಂದಾಗಿ ಜಾಗತಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚುವರಿಯಾಗಿ 1.1 ಟ್ರಿಲಿಯನ್ ಡಾಲರ್ ವೆಚ್ಚದ ಹೊರೆ ಬೀಳಲಿದೆ. ಅತಿ ಹೆಚ್ಚು ಸಾವುಗಳಿಗೆ ಪ್ರವಾಹವೇ ಕಾರಣವಾಗಲಿದ್ದು, ಸುಮಾರು 85 ಲಕ್ಷ ಜನರು ಇದರಿಂದ ಪ್ರಾಣ ಕಳೆದುಕೊಳ್ಳಬಹುದು ಎಂದು ವರದಿ ಹೇಳಿದೆ. ಎರಡನೇ ಅತಿದೊಡ್ಡ ಕಾರಣವಾಗಿರುವ ಬರಗಾಲದಿಂದ ಸುಮಾರು 32 ಲಕ್ಷ ಸಾವುಗಳು ಸಂಭವಿಸಬಹುದು.
ಇದನ್ನೂ ಓದಿ: ಕಿಮ್ ಜಾಂಗ್ ಉನ್‌ಗೆ ಶೇ. 99.93ರಷ್ಟು ಮತ! ಉತ್ತರ ಕೊರಿಯಾ ಚುನಾವಣಾ ಫಲಿತಾಂಶ ಕಂಡು ಬೆಚ್ಚಿಬಿದ್ದ ಜಗತ್ತು!
ಹೆಚ್ಚುತ್ತಿರುವ ತಾಪಮಾನದಿಂದಾಗಿ ಮಲೇರಿಯಾ, ಡೆಂಗ್ಯೂ ಮತ್ತು ಜಿಕಾ ವೈರಸ್‌ನಂತಹ ಕೀಟಗಳಿಂದ ಹರಡುವ ರೋಗಗಳು ಹಿಂದೆಂದೂ ಕಾಣದ ಪ್ರದೇಶಗಳಿಗೂ ಹರಡಲಿವೆ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ (ಭಾರತ ಸೇರಿದಂತೆ) ಪ್ರದೇಶಗಳು ಹವಾಮಾನ ಬದಲಾವಣೆಯ ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸಲಿವೆ. ಮೂಲಸೌಕರ್ಯಗಳ ಕೊರತೆ ಮತ್ತು ಸಂಪನ್ಮೂಲಗಳ ಮಿತಿಯಿಂದಾಗಿ ಈ ಭಾಗದ ಜನರು ಹೆಚ್ಚು ಬಾಧಿತರಾಗಲಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

