ವೈರಲ್ : ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಹಿಂದಿ ಚಿತ್ರರಂಗದಲ್ಲಿ “ಸಾಮುದಾಯಿಕ (ಕಮ್ಯೂನಲ್) ಪಕ್ಷಪಾತ” ಇದೆ ಎಂಬ ತಮ್ಮ ಹೇಳಿಕೆಯ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅವರನ್ನು ತರಾಟೆಗೆ ತೆಗೆದುಕೊಂಡರು. ಕೆಲಕಾಲ ಮೌನವಾಗಿದ್ದ ರೆಹಮಾನ್, ಇದೀಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಎ.ಆರ್. ರೆಹಮಾನ್ ಅವರ ವೀಡಿಯೋ ಸಂದೇಶ

View this post on Instagram
ಪ್ರಿಯ ಸ್ನೇಹಿತರೇ, ಸಂಗೀತ ಎಂದರೆ ನನಗೆ ಸದಾ ಸಂಸ್ಕೃತಿಯನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ಒಂದು ಮಾರ್ಗವಾಗಿದೆ. ಭಾರತವೇ ನನ್ನ ಪ್ರೇರಣೆ, ನನ್ನ ಗುರು ಮತ್ತು ನನ್ನ ಮನೆ. ಕೆಲವೊಮ್ಮೆ ನಮ್ಮ ಉದ್ದೇಶಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ನನ್ನ ಉದ್ದೇಶ ಸದಾ ಸಂಗೀತದ ಮೂಲಕ ಉತ್ತೇಜಿಸುವುದು, ಗೌರವಿಸುವುದು ಮತ್ತು ಸೇವೆ ಸಲ್ಲಿಸುವುದೇ ಆಗಿದೆ. ನಾನು ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ನನ್ನ ಪ್ರಾಮಾಣಿಕತೆಯನ್ನು ನೀವು ಅರ್ಥಮಾಡಿಕೊಳ್ಳುತ್ತೀರೆಂದು ಭಾವಿಸುತ್ತೇನೆ ಎಂದಿರುತ್ತಾರೆ.
ಬಾಲಿವುಡ್ ಕುರಿತು ವೈರಲ್ ಆದ ರೆಹಮಾನ್ ಅವರ ಹೇಳಿಕೆ
ಇದಕ್ಕೂ ಮೊದಲು, ಎ.ಆರ್. ರೆಹಮಾನ್ ಅವರು BBC ಏಷಿಯನ್ ನೆಟ್ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ತಮಗೆ ಕೆಲಸ ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡಿದ್ದರು. ಸಂದರ್ಶನದಲ್ಲಿ, ‘ನಿಮ್ಮನ್ನು ಬುಕ್ ಮಾಡಿದ್ದಾರೆ ಎಂದು ಹೇಳುತ್ತಾರೆ, ಆದರೆ ನಂತರ ಮ್ಯೂಸಿಕ್ ಕಂಪನಿ ಐದು ಜನ ಬೇರೆ ಸಂಗೀತ ನಿರ್ದೇಶಕರನ್ನು ನೇಮಿಸಿಕೊಳ್ಳುತ್ತದೆ, ಎಂದು ಬೇಸರ ವ್ಯಕ್ತಪಡಿಸುವಾಗ, ರೆಹಮಾನ್ ಕೊನೆಯಲ್ಲಿ ಹಗುರವಾಗಿ, ಅದು ಒಳ್ಳೆಯದೇ, ನನಗೆ ವಿಶ್ರಾಂತಿ ಸಿಗುತ್ತದೆ, ಕುಟುಂಬದ ಜೊತೆ ಸಮಯ ಕಳೆಯಬಹುದು ಎಂದು ನಗುತ್ತಾ ಹೇಳುತ್ತಾರೆ.
ಇದನ್ನೂ ಓದಿ : Film Industry : ಫೋಟೋಗ್ರಾಫರ್ ಸಿದ್ಧಾಂತ್ ನಾಗ್ ಜೊತೆ Toxic ನಟಿ ರುಕ್ಮಿಣಿ ವಸಂತ್ ಡೇಟಿಂಗ್? ಫೋಟೋ ವೈರಲ್
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

