ಚಿಕ್ಕಮಗಳೂರು, ಫೆ.5: ನಗರದ ಗಾಂಧಿನಗರದಲ್ಲಿ ಕಾಂಗ್ರೆಸ್ ಮುಖಂಡ ರಾಹಿಲ್ ಎಂಬುವವರು ರಾತ್ರಿ ವೇಳೆ ವಿವಾಹಿತ ಮಹಿಳೆಯೊಬ್ಬರ ಮನೆಯಲ್ಲಿದ್ದಾಗ ಅಕ್ಕಪಕ್ಕದ ಮನೆಯ ಯುವಕರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ?” ಎಂದು ಪ್ರಶ್ನಿಸಿದ ಯುವಕರು ರಾಹಿಲ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ದೃಶ್ಯಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂಬಂಧ ಇದೀಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ. ಘಟನೆಯ ಬಳಿಕ ಸಂತ್ರಸ್ತ ಮಹಿಳೆಯು ವಿಡಿಯೋವೊಂದನ್ನು ಹಂಚಿಕೊಂಡಿದ್ದು,ರಾಹಿಲ್ ಅವರು ತನಗೆ ಪರಿಚಿತರು ಹಾಗೂ ಸ್ನೇಹಿತರು ಎಂದು ಮಹಿಳೆ ಹೇಳಿದ್ದಾರೆ.
ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ಔಷಧಿ ನೀಡಲು ಮನೆಗೆ ಬಂದಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.ಆ ಸಮಯದಲ್ಲಿ ಕೆಲವರು ಸುಖಾಸುಮ್ಮನೆ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.ಕಾಂಗ್ರೆಸ್ ಮುಖಂಡ ರಾಹಿಲ್ ಎಂಬುವವರು ವಿವಾಹಿತ ಮಹಿಳೆಯ ಮನೆಯಲ್ಲಿದ್ದಾಗ ಅಕ್ಕಪಕ್ಕದ ಮನೆಯವರು ಅವರನ್ನು ಗಮನಿಸಿ ಪ್ರಶ್ನಿಸಿದ್ದಾರೆ. “ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ?” ಎಂದು ಯುವಕರು ಪ್ರಶ್ನಿಸಿ ಹಲ್ಲೆ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದೀಗ ಈಗ ಮಹಿಳೆಯ ಪತಿ ಕೀರ್ತಿ ಅವರ ಹೇಳಿಕೆಯೂ ಹೊರಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬುಧವಾರ ರಾತ್ರಿ ಸುಮಾರು 10:30 ಗಂಟೆಗೆ ಮನೆ ತೆರೆದಿತ್ತು. ಕೀರ್ತಿ ಅವರು ಕತ್ತಲಲ್ಲಿ ನಿಂತು ಗಮನಿಸುತ್ತಿದ್ದಾಗ, ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಬೈಕಿನಲ್ಲಿ ಬಂದು ಮನೆಯೊಳಗೆ ಹೋದದ್ದನ್ನು ಮತ್ತು ಬಳಿಕ ಬಾಗಿಲು ಹಾಕಿಕೊಂಡಿದ್ದನ್ನು ನೋಡಿದ್ದಾಗಿ ಹೇಳಿದ್ದಾರೆ.ತಾವು ಹೇಳಿದರೆ ಯಾರೂ ನಂಬುವುದಿಲ್ಲ ಎಂಬ ಕಾರಣಕ್ಕೆ, ಕೂಡಲೇ ಪತ್ನಿಯ ತಮ್ಮ, ತಾಯಿ, ಅಕ್ಕ ಸೇರಿದಂತೆ ಸಂಬಂಧಿಕರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಇದನ್ನೂ ಓದಿ : ಮದ್ಯಪಾನ ಮಾಡಿದ್ದ 10ನೇ ತರಗತಿಯ ವಿದ್ಯಾರ್ಥಿ 7ನೇ ಮಹಡಿಯಿಂದ ಬಿದ್ದು ಸಾವು
ಸಂಬಂಧಿಕರ ಸಮ್ಮುಖದಲ್ಲಿ ಒಳಗೆ ಹೋಗಿ ನೋಡಿದಾಗ, ರಾಹಿಲ್ ಷರೀಫ್ ಮತ್ತು ಪತ್ನಿ ಇಬ್ಬರೂ ಬೆಡ್ರೂಮ್ನಲ್ಲಿ ಇದ್ದರು ಎಂದು ಕೀರ್ತಿ ಆರೋಪಿಸಿದ್ದಾರೆ. ಈ ಮೊದಲು ಮಹಿಳೆಯು “ಆರೋಗ್ಯ ಸರಿ ಇಲ್ಲದ ಕಾರಣ ಔಷಧಿ ನೀಡಲು ಬಂದಿದ್ದರು” ಎಂದು ನೀಡಿದ್ದ ಹೇಳಿಕೆಗೂ, ಈಗ ಪತಿ ನೀಡುತ್ತಿರುವ “ಬೆಡ್ರೂಮ್ನಲ್ಲಿ ಇದ್ದರು” ಎಂಬ ಹೇಳಿಕೆಗೂ ಪರಸ್ಪರ ವಿರೋಧಾಭಾಸ ಕಂಡುಬರುತ್ತಿದೆ. ಪೊಲೀಸರು ಈ ಎರಡೂ ವಾದಗಳನ್ನು ಮತ್ತು ಘಟನೆಯ ವಿಡಿಯೋಗಳನ್ನು ಆಧರಿಸಿ ತನಿಖೆ ಮುಂದುವರಿಸಲಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

