ಬಂಟ್ವಾಳ: ನೇತ್ರಾವತಿ ನದಿ ತೀರದ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಸುಮಾರು 7 ಅಡಿ ಉದ್ದದ ಮೊಸಳೆ ಮನೆ ಆವರಣಕ್ಕೆ ನುಗ್ಗಿದ ಘಟನೆ ನೇಕ್ಕಿಲಾರು ಗ್ರಾಮದ ಪೂಪಾಡಿಕಟ್ಟೆ ಪ್ರದೇಶದಲ್ಲಿ ವರದಿಯಾಗಿದೆ.
ರಾಜೇಶ್ ನಾಯ್ಕ್ ಅವರ ಮನೆಯ ಆವರಣಕ್ಕೆ ಈ ಮೊಸಳೆ ನುಗ್ಗಿದ್ದು, ರಾತ್ರಿ ಸುಮಾರು 3 ಗಂಟೆ ವೇಳೆಗೆ ವಿಚಿತ್ರ ಶಬ್ದ ಕೇಳಿ ಹೊರಗೆ ಬಂದಾಗ ಮೊಸಳೆ ಕಾಣಿಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ದೊಡ್ಡ ಕೆರೆಯಲ್ಲಿ ಮೀನುಗಳ ಸಾವು! ತನಿಖೆಗೆ ಆಗ್ರಹ
ಮೊಸಳೆ ಕೆಲವು ಸಮಯ ಮನೆಯ ಮುಂದೆ ತೋಟದ ಭಾಗದಲ್ಲಿ ಸಂಚರಿಸಿ ಬಳಿಕ ಕಾಣೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ನೇತ್ರಾವತಿ ನದಿ ಸಮೀಪದ ಪ್ರದೇಶಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳು ವಿಶೇಷವಾಗಿ ರಾತ್ರಿ ಹಾಗೂ ಬೆಳಗಿನ ಜಾವ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

