ಮದುರೈ: ಕ್ಷುಲ್ಲಕ ಕಾರಣಕ್ಕಾಗಿ ನೆರೆಮನೆಯವರೊಂದಿಗೆ ಜಗಳವಾಡಿದ ಮಹಿಳೆಯೊಬ್ಬರು, ಆ ಸೇಡನ್ನು ತೀರಿಸಿಕೊಳ್ಳಲು ಅಮಾಯಕ ನಾಯಿಮರಿಗಳನ್ನು ಬಲಿಪಡೆದ ಘೋರ ಘಟನೆ ತಮಿಳುನಾಡಿನ ಮದುರೈನಲ್ಲಿ ನಡೆದಿದೆ. ಮಾರ್ಚ್ 4, 2026 ರಂದು ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಸಿಟಿವಿ ದೃಶ್ಯದ ಪ್ರಕಾರ, ಮಹಿಳೆಯು ರಸ್ತೆಯಲ್ಲಿದ್ದ ನಾಯಿಮರಿಗಳನ್ನು ಹಿಡಿದು ಕಾಂಪೌಂಡ್ ಗೋಡೆಗೆ ಮತ್ತು ರಸ್ತೆಗೆ ಬಲವಾಗಿ ಅಪ್ಪಳಿಸಿದ್ದಾಳೆ. ಈ ಭೀಕರ ಏಟಿನಿಂದಾಗಿ ಎರಡು ನಾಯಿಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.ವರದಿಗಳ ಪ್ರಕಾರ, ನೆರೆಮನೆಯವರೊಂದಿಗೆ ನಡೆದ ಜಗಳದ ವೇಳೆ ಎಸೆದ ಕಲ್ಲು ಮಹಿಳೆಯ ಮಗುವಿಗೆ ತಗುಲಿತ್ತು ಎನ್ನಲಾಗಿದೆ. ಇದರಿಂದ ಕೆರಳಿದ ಮಹಿಳೆ, ನೆರೆಮನೆಯವರು ಸಾಕುತ್ತಿದ್ದ ನಾಯಿಮರಿಗಳ ಮೇಲೆ ತನ್ನ ಆಕ್ರೋಶ ತೀರಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ
Madurai, Tamil Nadu
> A woman harmed several puppies
> Two puppies lost their lives
> The incident was recorded on a nearby CCTV camera
> People are demanding strict action against the womanHow can someone be so cruel?
Are women really the kinder gender? pic.twitter.com/yeYud7c081
— ︎ ︎venom (@venom1s) March 6, 2026
ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರ ಒತ್ತಡದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಆಕೆ ತನ್ನ ಮಗುವನ್ನೇ ಗುರಾಣಿಯಾಗಿ ಬಳಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದಳು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

