Breaking News

ವೃದ್ಧ ವೈದ್ಯ ದಂಪತಿಗೆ ವಂಚಿಸಿದ ಸೈಬರ್ ವಂಚಕರು

Digital arrest

ನವದೆಹಲಿ : ಅನಿವಾಸಿ ಭಾರತೀಯ ವೃದ್ಧ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಬಲೆಗೆ ಬೀಳಿಸಿ ಸುಮಾರು 15 ಕೋಟಿ ರೂ. ವಂಚಿಸಿದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವೈದ್ಯರಾಗಿ ದುಡಿದು ಸಂಪಾದಿಸಿದ್ದ ಹಣವನ್ನು ಎರಡು ವಾರದಲ್ಲಿ ಕಳೆದುಕೊಂಡಿದ್ದಾರೆ.

ಡಾ.ಓಂ ತನೇಜಾ ಮತ್ತು ಡಾ.ಇಂದಿರಾ ತನೇಜಾ ದಂಪತಿಯನ್ನು ಸೈಬರ್‌ ವಂಚಕರು ಎರಡು ವಾರಕ್ಕೂ ಅಧಿಕ ಕಾಲ ಬೆದರಿಸಿ ಡಿಜಿಟಲ್‌ ಅರೆಸ್ಟ್‌ ಮಾಡಿ 14.85 ಕೋಟಿ ರೂ. ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

48 ವರ್ಷಗಳ ಕಾಲ ಅಮೆರಿಕದಲ್ಲಿ ವೈದ್ಯರಾಗಿ ದುಡಿದು 2015ರಲ್ಲಿ ಈ ವೃದ್ಧ ದಂಪತಿ ತಮ್ಮ ಊರಿಗೆ ಬಂದಿದ್ದು, ದೆಹಲಿಯಲ್ಲಿ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿದ್ದ ದಂಪತಿ ಇಷ್ಟು ಸುಲಭದಲ್ಲಿ ಮೋಸ ಹೋಗಿರುವುದು ಆಶ್ಚರ್ಯವುಂಟು ಮಾಡಿದೆ. ಕಳೆದ ಡಿಸೆಂಬರ್‌ 24ರಂದು ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ಫೋನ್‌ ಮಾಡಿ ಬೆದರಿಸಲು ತೊಡಗಿದಾಗ ಈ ಕೃತ್ಯ ಶುರುವಾಗಿದೆ. ಅಕ್ರಮ ಹಣ ವರ್ಗಾವಣೆಗೆ ನಿಮ್ಮ ಬ್ಯಾಂಕ್‌ ಖಾತೆಗಳು ಬಳಕೆಯಾಗಿವೆ ಎಂದು ಹೇಳಿ ವಂಚಕರು ಅವರನ್ನು ಹೆದರಿಸಿದ್ದು.ನಂತರ ಬೆದರಿಸಿ ಜ.10ರ ತನಕ ಎಂಟು ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಕೇರಳದ ಉಚ್ಛಾಟಿತ ಕಾಂಗ್ರೆಸ್‌ ಶಾಸಕ ಅರೆಸ್ಟ್

ವಂಚಕರು ವೀಡಿಯೊ ಕಾಲ್‌ ಮೂಲಕ ವೈದ್ಯ ದಂಪತಿಯ ಚಲನವಲನಗಳನ್ನು ಗಮನಿಸುತ್ತಿದ್ದರು. ಡಾ.ಇಂದಿರಾ ತನೇಜಾ ಫೋನ್‌ ಕಾಲ್‌ ಮಾಡಲು ಮನೆಯಿಂದ ಹೊರಗೆ ಹೋದಾಗಲೆಲ್ಲ ವಂಚಕರು ಡಾ.ಓಂ ತನೇಜಾಗೆ ವೀಡಿಯೊ ಕಾಲ್‌ ಮಾಡಿ ಹೆದರಿಸಿ ಡಾ.ಇಂದಿರಾ ವಾಪಸ್‌ ಬರುವಂತೆ ಮಾಡುತ್ತಿದ್ದರು.

ಬ್ಯಾಂಕ್‌ ಮ್ಯಾನೇಜರ್‌ ಇಷ್ಟೊಂದು ದೊಡ್ಡ ಮೊತ್ತ ವರ್ಗಾವಣೆಯಾದ ಬಗ್ಗೆ ಪ್ರಶ್ನಿಸಿದಾಗ ವಂಚಕರು ಹೇಳಿದ ಕಥೆಯನ್ನೇ ಡಾ.ಇಂದಿರಾ ಹೇಳಿದ್ದರು. ಜ.10ರಂದು ವಂಚಕರು ಡಾ.ಇಂದಿರಾಗೆ ಫೋನ್‌ ಮಾಡಿ ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿ, ನೀವು ಹೋಗಿ ಬರುವಷ್ಟರಲ್ಲಿ ಎಲ್ಲ ಹಣ ನಿಮ್ಮ ಖಾತೆಗೆ ಆರ್‌ಬಿಐಯಿಂದ ಬಂದಿರುತ್ತದೆ ಎಂದು ಹೇಳಿದ್ದಾರೆ. ಡಾ.ಇಂದಿರಾ ವಂಚಕರ ಜೊತೆಗೆ ಮಾತನಾಡುತ್ತಲೇ ಪೊಲೀಸ್‌ ಠಾಣೆಗೆ ಹೋಗಿದ್ದಾರೆ. ಠಾಣೆಯ ಸ್ಟೇ಼ನ್‌ ಹೌಸ್‌ ಆಫೀಸರ್‌ ಜೊತೆ ಕೂಡ ವಂಚಕರು ಇದೇ ಕರೆಯಲ್ಲಿ ಮಾತನಾಡಿದ್ದಾರೆ. ಪೊಲೀಸ್‌ ಅಧಿಕಾರಿ ಜೊತೆ ಕೂಡ ಅವರು ಒರಟಾಗಿ ಮಾತನಾಡಿದ್ದು, ತಾವೂ  ಗಳಿಸಿದ್ದಲ್ಲವನ್ನೂ ಕಳೆದುಕೊಂಡು ಈ ವೃದ್ಧ ದಂಪತಿ ಆಘಾತಕ್ಕೊಳಗಾಗಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು